
Crime
ಉಡುಪಿ: ಮನೆಯೊಳಗಿದ್ದ ಕೀ ಕದ್ದು ಹೊರಗಡೆ ನಿಲ್ಲಿಸಿದ್ದ ಕಾರು ಕಳವುಗೈದ ಕಳ್ಳರು
ಸಾಂದರ್ಬಿಕ ಚಿತ್ರ
ಉಡುಪಿ: ಮನೆಯೊಳಗಿದ್ದ ಕೀ ಕದ್ದು ಹೊರಗಡೆ ನಿಲ್ಲಿಸಿದ್ದ ಕಾರನ್ನು ಕಳ್ಳರು ಕಳವು ಮಾಡಿರುವ ಘಟನೆ ಡಿ.9ರಂದು ರಾತ್ರಿ ವೇಳೆ ನಡೆದಿದೆ.
ಅಂಬಲಪಾಡಿ ಗ್ರಾಮದ ಕಾಳಿಕಾಂಬ ನಗರ ನಿವಾಸಿ ಶಾರದಾ ಎಂಬವರು ಮನೆಗೆ ಬೀಗ ಹಾಕಿ ಗಂಡನೊಂದಿಗೆ ಬೆಂಗಳೂರಿಗೆ ಹೋಗಿದ್ದು, ಈ ವೇಳೆ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾರಿನ ಕೀಯನ್ನು ತೆಗೆದು ಮನೆಯ ಹೊರಗಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಹಾಗೂ ಆರ್ಸಿ, ಡಿಎಲ್, ಇನ್ಶುರೆನ್ಸ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಕಾರಿನ ಮೌಲ್ಯ 7ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




