ತೊಂಭಟ್ಟಿನಲ್ಲಿ ನಾಪತ್ತೆಯಾಗಿದ್ದ ಯುವಕ 8 ದಿನಗಳ ನಂತರ ಪತ್ತೆ

ತೊಂಭಟ್ಟಿನಲ್ಲಿ ನಾಪತ್ತೆಯಾಗಿದ್ದ ಯುವಕ 8 ದಿನಗಳ ನಂತರ ಪತ್ತೆಯಾಗಿದ್ದಾನೆ.

ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಎಂಬವರ ಮಗ ವಿವೇಕಾನಂದ (28) ಎಂಬವರು ಸೆ.16ರಂದು ಮನೆಯಿಂದ ನಾಪತ್ತೆಯಾಗಿದ್ದರು.

ಕಬ್ಬಿನಾಲೆಯಲ್ಲಿ ಪತ್ತೆಯಾಗಿದ್ದು ಅನ್ನ ಆಹಾರದವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 26/2023 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿತ್ತು.

Latest Indian news

Popular Stories