ಉಡುಪಿ: ಪ್ರತ್ಯೇಕ ಪ್ರಕರಣ – ಮೂವರ ಅಸ್ವಾಭಾವಿಕ ಮೃತ್ಯು !

ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ವಿವಿಧೆಡೆಯಿಂದ ಒಟ್ಟು ಮೂವರು ಅಸ್ವಾಭಾವಿಕವಾಗಿ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಪ್ರಕರಣ ೧:

ಹೆಬ್ರಿ ಮುದ್ರಾಡಿ ದ ಕರುಣಾಕರ (70) ಎಂಬುವವರು ಕೆಳಕಿಳ ನದಿಯು ಹಾದು ಹೋಗುವ ಮುದ್ರಾಡಿ ಗ್ರಾಮದ ಗುಂಡಾಳದ ತನ್ನ ಮನೆಯ ಹಿಂದೆ ನದಿಗೆ ಅಡ್ಡಲಾಗಿ ಮಣ್ಣು ಹಾಕಿ ನೀರು ನಿಲ್ಲಿಸಿರುವ ಸ್ಥಳಕ್ಕೆ ಸ್ನಾನ ಮಾಡಲು ಹೋದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ೨:

ಕಾಪು: ಉದ್ಯಾವರದ ಅನಿಲ್‌ (46) ಎಂಬುವವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 30/05/2024 ರಂದು 09:30 ಗಂಟೆಗೆ ಪಿತ್ರೋಡಿಯ ವಾಸು ರವರಿಗೆ ಸಂಬಂಧಿಸಿದ ದೋಣಿಯಲ್ಲಿ ಮೀನು ಹಿಡಿಯಲು ಭರತೇಶ ಎಂಬುವವರೊಂದಿಗೆ ಹೋಗಿ ಉದ್ಯಾವರ ಗ್ರಾಮದ ಪಿತ್ರೋಡಿ ಎಂಬಲ್ಲಿ ಪಾಪನಾಶಿನಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ 10:30 ಗಂಟೆಗೆ ಅನಿಲ್‌ನು ಆಯತಪ್ಪಿ ದೋಣಿಯೊಳಗೆ ಅಳವಡಿಸಿರುವ ವಾಡಿ ಮೇಲೆ ತಲೆ ಕೆಳಗಾಗಿ ಬಿದ್ದಿದ್ದು ಅವರನ್ನು ಕೂಡಲೇ ಜೊತೆಯಲ್ಲಿದ್ದ ಭರತೇಶರವರು ಉಡುಪಿ TMA Pai ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈ 12:30 ಗಂಟೆಗೆ ಅನಿಲ್‌ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ೩:

ಬ್ರಹ್ಮಾವರ:  ನಾರಾಯಣ (34) ಎಂಬುವವರಿಗೆ ಮದುವೆಯಾಗಿ 8 ವರ್ಷವಾದರೂ ಮಕ್ಕಳಾಗದ ಕಾರಣ ಮನನೊಂದು ವಿಪರೀತ ಮಧ್ಯಸೇವನೆ ಮಾಡುತ್ತಿದ್ದು, ಈ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ದಿನಾಂಕ 30/05/2024 ರಂದು ಬೆಳಿಗ್ಗೆ 12:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ ಮಧ್ಯಾವಧಿಯಲ್ಲಿ 34 ಕುದಿ ಗ್ರಾಮದ, ನುಕ್ಕುರು ಅಣ್ಣಪ್ಪರವರ ಅಂಗಡಿಯ ಬಳಿ ಮಲಗಿದ್ದು, ಅವರನ್ನು ಎಬ್ಬಿಸಲು ಎಷ್ಟೇ ಪ್ರಯತ್ನಪಟ್ಟರೂ ಅವರು ಮಾತನಾಡುತ್ತಿರಲಿಲ್ಲ, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಧ್ಯಾಹ್ನ 3:25 ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ನಾರಾಯಣಯವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 36/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories