CrimeUdupi

ಉಡುಪಿ: ಪ್ರತ್ಯೇಕ ಪ್ರಕರಣ – ಇಬ್ಬರು ನಾಪತ್ತೆ

ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನಾಪತ್ತೆಯಾದ ಕುರಿತು ದೂರು ದಾಖಲಾಗಿದೆ.

ಮೆಹೆಂದಿ ಕಾರ್ಯಕ್ರಮಕ್ಕೆಂದು ಹೋದವರು ನಾಪತ್ತೆ:

ವಿಜಯ ಎಂಬವರು ತೆಕ್ಕಟ್ಟೆ ಗ್ರಾಮದ ಕೆನರಾ ಬ್ಯಾಂಕ್ ಬಳಿ ಯುನಿಫಾರ್ಮ ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿರುತ್ತಾರೆ. ಸ್ನೇಹಿತನ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಲೇಟಾಗಿ ಬರುವುದಾಗಿ ಹೇಳಿದ್ದು ದಿನಾಂಕ 10/01/2024 ರಂದು ಬೆಳಗ್ಗೆ 10:00 ಗಂಟೆಯವರೆಗೂ ಬಾರದೆ ನಾಪತ್ತೆಯಾಗಿದ್ದು, ಎಲ್ಲಿ ಹುಡುಕಿದರೂ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2024 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆ ನಾಪತ್ತೆ: ಮುಂಬೈನಲ್ಲಿ ತನ್ನ ಮಗಳೊಂದಿಗೆ ವಾಸವಾಗಿದ್ದ ಬಚ್ಚಿ(69) ಎಂಬ ಮಹಿಳೆ ನಾಪತ್ತೆಯಾಗಿದ್ದು ನೆಂಟರಿಷ್ಟರು ಮನೆಗಳಲ್ಲಿ, ವೃದ್ಧಾಶ್ರಮ, ಅನಾಥಾಲಯಗಳಲ್ಲಿ  ಹುಡುಕಾಡಿದಲ್ಲಿ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2024 : ಕಲಂ  ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button