ಉದ್ಯಾವರ: ಸೌಹಾರ್ದ ಮತ್ತು ವಿಶಿಷ್ಟ ರೀತಿಯಲ್ಲಿ ಈಸ್ಟರ್ ಹಬ್ಬದ ಆಚರಣೆ

ಸೌಹಾರ್ದ ಸಮಿತಿ ಉದ್ಯಾವರ ಇದರ ಮಾಜಿ ಅಧ್ಯಕ್ಷರು ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಇದರ ಪದಾಧಿಕಾರಿ ಹಾಗೂ ಯುವ ಉದ್ಯಮಿಯಾಗಿರುವಂತ ಲಯನ್ ವಿಲ್ಫ್ರೆಡ್ ಡಿಸೋಜರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಇಂದು ಈಸ್ಟರ್ ಹಬ್ಬವನ್ನು ವಿಶಿಷ್ಟ ಮತ್ತು ಸೌಹಾರ್ದತೆಯಲ್ಲಿ ಆಚರಿಸಿದರು.

ಸರಕಾರದ ಯೋಜನೆಗಳನ್ನು ಜಾತಿ ಮತ ಭೇದವಿಲ್ಲದೆ ಸರ್ವರಿಗೂ ಬಾಗಿಲವರೆಗೂ, ಯಾವುದೇ ಪ್ರಚಾರವಿಲ್ಲದೆ ಜನರ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿಕೊಂಡಿರುವಂತಹ, ಡಿಜಿಟಲ್ ಸೇವಾ ಕೇಂದ್ರದ ಮೂಲಕ ರಾಜ್ಯದಲ್ಲಿಯೇ ವಿಶಿಷ್ಟವಾದ ಸ್ಥಾನಮಾನ ಹೊಂದಿರುವಂತಹ ಉದ್ಯಾವರದ ಸೌಮ್ಯ ಇವರನ್ನು ಅವರ ಪತಿ ಹರಿಶ್ಚಂದ್ರ ರವರ ಉಪಸ್ಥಿತಿಯಲ್ಲಿ ಲಯನ್ ವಿಲ್ಫ್ರೆಡ್ ಡಿಸೋಜರವರು ತಮ್ಮ ಸಂಪಿಗೆ ನಗರದಲ್ಲಿರುವ ಸ್ವಗೃಹದಲ್ಲಿ ಹಬ್ಬದ ಪ್ರಯುಕ್ತ ಅಭಿನಂದಿಸಿ ಗೌರವ ಧನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಲಯನ್ ವಿಲ್ಫ್ರೆಡ್ ಡಿಸೋಜರವರ ತಾಯಿ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಸೌಹಾರ್ದತೆಯ ನಾಡಿನಲ್ಲಿ ಈಸ್ಟರ್ ಹಬ್ಬದ ಸಂಭ್ರಮದಲ್ಲಿ ನಡೆದಂತಹ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ಮತ್ತು ಮಾದರಿ.

Latest Indian news

Popular Stories