Crime

ಯುಪಿಎ, ಎನ್‌ಡಿಎ: ಅಧಿಕ ಏಮ್ಸ್ ಆರಂಭಿಸಿದ್ದು ಯಾರು ?

ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಏಮ್ಸ್ ಕಾರ್ಯಾರಂಭ ಮಾಡಿದ್ದು ಯಾರ ಅವಧಿಯಲ್ಲಿ ?, ಯುಪಿಎ, ಎನ್‌ಡಿಎ ?
ಹೌದು: UPA NDA ಕೆಲ ಕಾರಣಗಳಿಂದಾಗಿ ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಬಿಜೆಪಿಯ ಕೆಲ ನಾಯಕರು ಮತ್ತು ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಏಮ್ಸ್ ಆರಂಭವಾಗಿವೆ ಎಂದು ವಾದಿಸುತ್ತಿರುವುದರಿಂದ ಈ ವಿಷಯ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ವಾಸ್ತವ ಏನು ?, ಯಾರ ಅವಧಿಯಲ್ಲಿ ಅಧಿಕ ಏಮ್ಸ್ ಆರಂಭವಾಗಿವೆ ?


ಬಿಜೆಪಿಯ ಬೆಂಬಲಿಗರು ಏಮ್ಸ್ ಆರಂಭಕ್ಕೆ ಸಂಬAಧಿಸಿದAತೆ ಕೆಲ ಇನ್ಫೋಗ್ರಾಫಿಕ್ಸ್ ಹಂಚಿಕೊAಡಿದ್ದಾರೆ. ಇದರ ಪ್ರಕಾರ ಯುಪಿಎ ಆಡಳಿತದಲ್ಲಿ ಅಂದರೆ, ಡಾ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಒಂದೇ ಏಮ್ಸ್ ಆರಂಭಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಏಮ್ಸ್ ಶುರುವಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷಗಳ ಆಡಳಿತದ ಅವಧಿಯಲ್ಲಿ 15 ಏಮ್ಸ್ ಸಂಸ್ಥೆ ಸ್ಥಾಪಿಸಲಾಗಿದೆ. ಆದರೆ, ಡಾ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಒಂದೇ ಏಮ್ಸ್ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು ಎಂಬ ಮಾಹಿತಿ ಇನ್ಫೋಗ್ರಾಫಿಕ್ಸ್ನಲ್ಲಿದೆ.
ಬಿಹಾರದ
ಬಿಹಾರ ಸರ್ಕಾರದ ಲೋಕೋಪಯೋಗಿ ಸಚಿವ ನಂದ್ ಕಿಶೋರ್ ಯಾದವ್ ಅವರು ಈ ಇನ್ಫೋಗ್ರಾಫಿಕ್ಸ್ಅನ್ನು ಹಂಚಿಕೊAಡವರಲ್ಲಿ ಒಬ್ಬರು. ರಾಜಕೀಯ ನಿರೂಪಕ ಅಭಿನವ್ ಪ್ರಕಾಶ್ ಅವರು 14 ಏಮ್ಸ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ, ಅದರಲ್ಲಿ 11 ಕ್ರಿಯಾತ್ಮಕವಾಗಿವೆ ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್ 8,000 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 3,400 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಪಡೆದುಕೊಂಡಿದೆ.
ಬಿಜೆಪಿ ಬೆಂಬಲಿಗರಾದ ಅರುಣ್ ಪುದೂರ್ ಕೂಡ ಈ ಪಟ್ಟಿಯನ್ನು ಹಂಚಿಕೊAಡಿದ್ದಾರೆ. ಡಾ.ಮನಮೋಹನಸಿಂಗ್ ಪ್ರಧಾನಿಯಾಗಿದ್ದ 10 ವರ್ಷಗಳ ಅವಧಿಯಲ್ಲಿ ಒಂದು ಏಮ್ಸ್ ಅನ್ನು ಇಟಾಲಿಯನ್ ಮಾತಾ ಕ್ಷೇತ್ರದಲ್ಲಿ ಆರಂಭಿಸಲಗಿತ್ತು ಎಂದು ಪುಡೂರ್ ಬರೆದಿದ್ದಾರೆ.

UPA NDA 1 Crime

ದಾರಿತಪ್ಪಿಸುವ ಯತ್ನ
ದೇಶದ ಮೊದಲ ಆರೋಗ್ಯ ಸಚಿವ ಅಮೃತ್ ಕೌರ್ ಅವರ ನೇತೃತ್ವದಲ್ಲಿ 1956 ರಲ್ಲಿ ದೇಶದಲ್ಲಿ ಮೊದಲ ಏಮ್ಸ್ ಸ್ಥಾಪಿಸಲಾಯಿತು. ಅಂದಿನಿAದ, ಆರು ಹೊಸ ಏಮ್ಸ್ ಅನ್ನು ಕ್ರಿಯಾತ್ಮಕಗೊಳಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2003 ರಲ್ಲಿ ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಯನ್ನು ಘೋಷಿಸಿತು, “ಕೈಗೆಟುಕುವ ಮತ್ತು ವಿಶ್ವಾಸಾರ್ಹ ತೃತೀಯ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವುದು ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.
2003 ರಲ್ಲಿ ಅವರ ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ, ಮಾಜಿ ಪ್ರಧಾನಿ ಪಿಎಂಎಸ್‌ಎಸ್‌ವೈ ಅಡಿಯಲ್ಲಿ `ದೆಹಲಿಯ ಏಮ್ಸ್ನಲ್ಲಿ ಲಭ್ಯವಿರುವಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಆರು ಹೊಸ ಆಸ್ಪತ್ರೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಸ್ಥಾಪಿಸಲಾಗುವುದು” ಎಂದು ಘೋಷಿಸಿದರು. ಆದರೆ ವಾಜಪೇಯಿ ಸರ್ಕಾರ ಘೋಷÀಣೆ ಮಾಡಿದ ಒಂಬತ್ತು ತಿಂಗಳ ನಂತರ ಅಧಿಕಾರದಿಂದ ಹೊರಬಂದಿತು.
ಆರು ಆಸ್ಪತ್ರೆಗಳನ್ನು ಯುಪಿಎ ನಿಯಮದಡಿಯಲ್ಲಿ ಸ್ಥಾಪಿಸಲಾಯಿತು. 2011 ರಲ್ಲಿ ಪ್ರಕಟವಾದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಹೇಳುವಂತೆ, “ಎನ್‌ಡಿಎ ಸರ್ಕಾರವು ಈ ಉಪಕ್ರಮವನ್ನು ಕೇವಲ ಚುನಾವಣಾ-ಆಧಾರಿತವೆಂದು ಪರಿಗಣಿಸಿದೆ ಮತ್ತು ಭೂಮಿಯನ್ನು ಸರಿಯಾಗಿ ಹಸ್ತಾಂತರಿಸದೆ ಅಕ್ಟೋಬರ್ 2003 ಮತ್ತು ಮಾರ್ಚ್ 2004 ರ ನಡುವೆ ಅಡಿಪಾಯ ಕಲ್ಲುಗಳನ್ನು ಹಾಕುವ ಸಾಮಾನ್ಯ ಕೆಲಸ ಮಾತ್ರ ನಡೆಸಿದೆ’.
“ಯುಪಿಎ ಅಧಿಕಾರಕ್ಕೆ ಬಂದ ನಂತರ, ಮಾರ್ಚ್ 2006 ರಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ನೀಡಲಾಯಿತು. .. ಎಂದು ವರದಿಯನ್ನು ಮುಂದುವರಿಸುತ್ತಾ, “2009 ರಲ್ಲಿ ಸರ್ಕಾರವು ಅನುಮತಿ ಮತ್ತು ಡಿಪಿಆರ್‌ಗಳನ್ನು ಪಡೆದಾಗ ನಿಜವಾದ ಕೆಲಸ ಪ್ರಾರಂಭವಾಗಲು ಆರು ವರ್ಷಗಳು ಬೇಕಾಯಿತು. ಗುತ್ತಿಗೆದಾರರನ್ನು ಆಯ್ಕೆ ಮಾಡಲಾಯಿತು ಮತ್ತು ಜೂನ್ 2010 ರಲ್ಲಿ ನಿರ್ಮಾಣ ಕಾರ್ಯ ಶುರುವಾಯಿತು.. ಎನ್ನುತ್ತದೆ, ಈ ವರದಿ.
ಪಿಎಂಎಸ್‌ಎಸ್‌ವೈನ ಹಂತ -1 ರ ಅಡಿಯಲ್ಲಿ ಈ ಆರು ಹೊಸ ಏಮ್ಸ್ ಅನ್ನು ಭೋಪಾಲ್, ಭುವನೇಶ್ವರ, ಜೋಧ್‌ಪುರ, ಪಾಟ್ನಾ, ರಾಯ್‌ಪುರ, ಮತ್ತು ಹೃಷಿಕೇಶದಲ್ಲಿ ಸ್ಥಾಪಿಸಲಾಯಿತು. 2012 ರಲ್ಲಿ ಈ ಏಮ್ಸ್ನಲ್ಲಿ ನಿಯಮಿತ ಎಂಬಿಬಿಎಸ್ ಬ್ಯಾಚ್‌ಗಳು ಪ್ರಾರಂಭವಾದರೆ, ನಿಯಮಿತ ನರ್ಸಿಂಗ್ ಕೋರ್ಸ್ಗಳು 2013 ರಲ್ಲಿ ಪ್ರಾರಂಭವಾದವು ಎಂದು ಪಿಎಂಎಸ್‌ಎಸ್‌ವೈ ವೆಬ್‌ಸೈಟ್ ಹೇಳುತ್ತದೆ.
ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಅಡಿಯಲ್ಲಿ ಕೆಲಸಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ಗಮನಾರ್ಹ. ಉದಾಹರಣೆಗೆ, ಏಮ್ಸ್ ಭೋಪಾಲ್‌ನಲ್ಲಿ 2013 ರಲ್ಲಿ ವೈದ್ಯಕೀಯ ಕಾಲೇಜು ಮತ್ತು ಹೊರರೋಗಿಗಳ ವಿಭಾಗ (ಒಪಿಡಿ) ಸೇವೆಗಳನ್ನು ಪ್ರಾರಂಭಿಸಲಾಗಿದ್ದರೆ, ಇನ್-ಪೇಷಂಟ್ ಡಿಪಾರ್ಟ್ಮೆಂಟ್ (ಐಪಿಡಿ) ಮತ್ತು ಖಾಸಗಿ ವಾರ್ಡ್ಗಳನ್ನು ಕ್ರಮವಾಗಿ 2014 ಮತ್ತು 2017 ರಲ್ಲಿ ಉದ್ಘಾಟಿಸಲಾಯಿತು. 2019 ರಲ್ಲಿ ಸಿಎಜಿ ವರದಿಯೊಂದು ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ. ಈ ಹೊಸ ಏಮ್ಸ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇನ್ನೂ ಬಾಕಿ ಉಳಿದಿದೆ, ಅವು ಇನ್ನೂ ದೆಹಲಿಯ ಏಮ್ಸ್ನಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಶುರುವಾಗಿವೆ ಎಂದು ಹೇಳಲಾಗಿರುವ ಮತ್ತು ವೈರಲ್ ಆಗಿರುವ ಪಟ್ಟಿಯಲ್ಲಿ ಮನ್ನಣೆ ಪಡೆಯುತ್ತಿರುವ ಎಲ್ಲಾ ಆರು ಏಮ್ಸ್ ಅನ್ನು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾಗಿತ್ತು.
ದೇಶದ ಏಮ್ಸ್ ಸಂಸ್ಥೆಗಳ ಸ್ಥಿತಿಗತಿ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಕುಟುಂಬ ಕಲ್ಯಾಣ ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕಳೆದ ವರ್ಷ, “22 ಏಮ್ಸ್ ಅನ್ನು ಪಿಎಂಎಸ್‌ಎಸ್‌ವೈ ಅಡಿಯಲ್ಲಿ ಸ್ಥಾಪಿಸಲು ಘೋಷಿಸಲಾಗಿದೆ ಮತ್ತು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದರು.
ಈ ಪೈಕಿ ಆರು (06) ಏಮ್ಸ್ ಅಂದರೆ ಭೋಪಾಲ್, ಭುವನೇಶ್ವರ, ಜೋಧಪುರ್, ಪಾಟ್ನಾ, ರಾಯ್‌ಪುರ ಮತ್ತು ರಿಷಿಕೇಶ್ ಕ್ರಿಯಾತ್ಮಕವಾಗಿವೆ. ಇತರ 16 ಏಮ್ಸ್ ಅವುಗಳ ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇದು ಕೇಂದ್ರ ಸಚಿವರು ನೀಡಿರುವ ಉತ್ತರ.
16 ಏಮ್ಸ್ ಪೈಕಿ, ರಾಯ್‌ಬರೇಲಿಯಲ್ಲಿ ಒಂದು ಏಮ್ಸ್ ಆರಂಭಿಸಲು 2009 ರಲ್ಲಿ ಪಿಎಂಎಸ್‌ಎಸ್‌ವೈ ಯ ಎರಡನೇ ಹಂತದ ಅಡಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರವು ಅನುಮೋದನೆ ನೀಡಿತ್ತು. ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, “ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಒಂದು ದಶಕದ ನಂತರ, ರಾಯ್ ಬರೇಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರ ರೋಗಿಗಳ ವಿಭಾಗ (ಒಪಿಡಿ) ಪ್ರಾರಂಭವಾಯಿತು.
ಇತರ 15 ಏಮ್ಸ್ ಅನ್ನು ಪಿಎಂ ಮೋದಿ ಘೋಷಿಸಿದರು, ಅವುಗಳಲ್ಲಿ ಕೆಲವು ಭಾಗಶಃ ಹೊರ ರೋಗಿಗಳ ವಿಭಾಗ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಕೆಲವು ಸೇವೆಗಳನ್ನು ಪ್ರಾರಂಭಿಸಿವೆ ಎನ್ನುವುದನ್ನು ಗಮನಿಸಬೇಕು.
ವೈರಲ್ ಆಗಿರುವ ಪಟ್ಟಿ ತಪ್ಪು ದಾರಿಗೆಳೆಯುವಂತಿದೆ. ಇಲ್ಲಿಯವರೆಗೆ, ಏಳು ಏಮ್ಸ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಏಮ್ಸ್ ದೆಹಲಿಯನ್ನು ಒಳಗೊಂಡಿದೆ. ಆರು ಹೊಸ ಏಮ್ಸ್ ಅನ್ನು ಬಿಜೆಪಿ ಸರ್ಕಾರ ಘೋಷಿಸಿತ್ತು ಎನ್ನುವುದು ನಿಜ. ಆದರೆ, ಅವು ನಿರ್ಮಾಣಗೊಂಡಿದ್ದು ಕಾಂಗ್ರೆಸ್ ಸರ್ಕಾರ ಇದ್ದಾಗ. ಏಮ್ಸ್ ರಾಯ್‌ಬರೇಲಿಯನ್ನು ಕ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button