ಉ.ಕ | ಕರಾವಳಿಯಲ್ಲಿ ಭಾರೀ ಮಳೆ

ಕಾರವಾರ : ಉತ್ತರ ಕನ್ನಡ ಕರಾವಳಿಯ ತಾಲೂಕುಗಳಾದ ಅಂಕೋಲಾ ,ಕುಮಟಾದಲ್ಲಿ ಭಾರೀ ಮಳೆಯಾಗಿದೆ. ಗಡುಗು, ಗಾಳಿ ಸಹಿತ ಬಿದ್ದ ಮಳೆಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ .‌ಬಿಸಿಲಿನ ಝಳಕ್ಕೆ ಕಾದ ಕಾವಲಿಯಂತಾಗಿದ್ದ ಇಳೆಗೆ ಮಳೆ ತಂಪೆರೆಯಿತು.

ಘಟ್ಟದ ತಾಲೂಕುಗಳಾದ ಹಳಿಯಾಳ ದಾಂಡೇಲಿಯಲ್ಲಿ ಸತತ ಎರಡು ತಾಸು ಮಳೆ ಸುರಿಯಿತು. ಕುಮಟಾ, ‌ಅಂಕೋಲಾ ರಸ್ತೆಯಲ್ಲಿ ಮಳೆ ನೀರು ಆವೃತವಾಗಿತ್ತು.

Latest Indian news

Popular Stories