ಉತ್ತರ ಕನ್ನಡದಲ್ಲಿ ಅಂದಾಜು ಶೇ.75 ರಷ್ಟು ಮತದಾನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಜೆ 5 ಗಂಟೆಗೆ ಕ್ಕೆ ,70.61 ರಷ್ಟು ಮತದಾನವಾಗಿತ್ತು‌. ಜಿಲ್ಲಾ ಚುನಾವಣಾಧಿಕಾರಿ ನೀಡಿದ ಮಾಹಿತಿ ಪ್ರಕಾರ ಮತದಾನ ಶೇ.75 ತಲುಪಬಹುದು .
ಕಳೆದ ಲೋಕಸಭಾ ಚುನಾವಣಾ 2019 ರಲ್ಲಿ ಶೇ. 74 ರಷ್ಟು ಮತದಾನವಾಗಿತ್ತು‌. ನೋಟಾಕ್ಕೆ 16000 ಮತ ಬಿದ್ದಿದ್ದವು. ಈ ಸಲ ಮತದಾನ ಪ್ರಮಾಣ ಹೆಚ್ಚಲಿದೆ ಎಂದು ಊಹಿಸಲಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಕಾರವಾರ ನಗರದ ಜಿಲ್ಲೆಯಲ್ಲಿ ಹತ್ತು ಗಂಟೆಗೆ ಶೇ.16 ರಷ್ಟು ಮತದಾನವಾಗಿತ್ತು. ಸೇಂಟ್ ಮೈಕಲ್ ಶಾಲೆಯ ಮತ ಕೇಂದ್ರದಲ್ಲಿ ಒಂದೇ ಕುಟುಂಬದ ಹತ್ತು ಜನ ಮತದಾನ ಮಾಡಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದರು. ಅವರ ಮಗಳು ತ್ರಿಶಿಕಾ ಮೊದಲ ಸಲ‌ಮತ ಚಲಾಯಿಸಿದಳು. ಜಿಲ್ಲಾಧಿಕಾರಿ ಸಹೋದರನ ಮಗ ಅಭಿಷೇಕ ಸಹ ಯುವ ಮತದಾರನಾಗಿ ಮತ ಚಲಾಯಿಸಿದ.
ಮತದಾನ ಆರಂಭದಲ್ಲಿ ಬಿರುಸಾಗಿತ್ತು‌ .ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಜನ ಬೆಳಿಗ್ಗೆ ಮತದಾನಕ್ಕೆ ಉತ್ಸಾಹ ತೋರಿದರು.
ಮಧ್ಯಾಹ್ನ ಉರಿಬಿಸಲು ಇದ್ದ ಕಾರಣ ಮತದಾನ ನಿಧಾನ ಗತಿ ತಲುಪಿತ್ತು‌ .ಬೆಳಂಬಾರ ಮತ ಕೇಂದ್ರದಲ್ಲಿ ಮಾತ್ರ ಮಧ್ಯಾಹ್ನ ಬಿಸಲಿಲ್ಲಿಯೇ ಮಹಿಳೆಯರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು‌ .

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
ಸಂಜೆ 5 ಗಂಟೆ ವೇಳೆಗೆ ಶೇ.70.61 ಮತದಾನವಾಗಿದ್ದು
ಶಿರಸಿ ಕ್ಷೇತ್ರದಲ್ಲಿ ಶೇ. 74.65, ಯಲ್ಲಾಪುರ 74.17, ಕಾರವಾರ 68.08, ಹಳಿಯಾಳ 70.24, ಕುಮಟಾ 71.50 , ಭಟ್ಕಳ ಕ್ಷೇತ್ರದಲ್ಲಿ 69.43, ಖಾನಾಪುರದಲ್ಲಿ ಶೇ. 69.59 , ಕಿತ್ತೂರು ನಲ್ಲಿ 67.94 ಮತದಾನವಾಗಿತ್ತು.
…..

Latest Indian news

Popular Stories