ಮಾಧ್ಯಮ ಸ್ವಾತಂತ್ರ ಹತ್ತಿಕ್ಕುತ್ತಿರುವ ಸರಕಾರದ ಕ್ರಮ ವೆಲ್ಫೇರ್ ಪಾರ್ಟಿ ಖಂಡನೀಯ

ಬೆಂಗಳೂರು,ಸೆ.29(ಯುಎನ್‍ಐ) ಬಿಜೆಪಿ ಮುಖಂಡರೊಬ್ಬರ ಭೃಷ್ಟಚಾರ ಬಯಲಿಗೆಳೆದ ಕಾರಣ ಸರಕಾರ ಪವರ್ ಟಿವಿಯನ್ನು ಬಂದ್ ಮಾಡಲು ಹೊರಟಿರುವುದು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯವೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪವರ್ ಟಿವಿ ಆರೋಪವೊಂದರ ಬಗ್ಗೆ ಹಲವು ದಿನಗಳಿಂದ ಸತತ ದಾಖಲೆ ಸಹಿತ ವರದಿ ಮಾಡಿ ರಾಜ್ಯದ ಗಮನ ಸೆಳೆಯಲಾಗಿತ್ತು. ಇದೇ ಕಾರಣಕ್ಕಾಗಿಯೇ ಗುತ್ತಿಗೆದಾರ ಚಂದ್ರಕಾಂತ್ ಎಂಬವರು ನೀಡಿದ ದೂರನ್ನು ಪೆÇಲೀಸರು ನೆಪವಾಗಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಪವರ್ ಟಿವಿ ಸಂಸ್ಥೆಯು ಆರೋಪಿಸಿದೆ. ಅಲ್ಲದೇ ಮಾಧ್ಯಮ ಸ್ವಾತಂತ್ರ ಹತ್ತಿಕ್ಕುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿರುವುದು ಅಕ್ಷಮ್ಯವಾಗಿದೆ ಎಂದು ಅವರು ದೂರಿದ್ದಾರೆ.
ಕೂಡಲೇ ಸರಕಾರ ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸುವದನ್ನು ಬಿಟ್ಟು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಬೇಕೆಂದು ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಒತ್ತಾಯಿಸಿದರು.

Latest Indian news

Popular Stories