ಬೈಕ್‌ಗಳು ಢಿಕ್ಕಿಯಾಗಿ ಓರ್ವ ಮೃತ್ಯು: ನಾಲ್ವರಿಗೆ ಗಾಯ


ಮಂಗಳೂರು: ಬೈಕ್‌ಗಳು ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಸುರತ್ಕಲ್‌ನ ಎಂಆರ್‌ಪಿಎಲ್ ರಸ್ತೆಯ ಕಾನ ಕಟ್ಲ ಸೀತಾ ಕಾಂಪೌಂಡ್ ಬಳಿ ನಡೆದಿದೆ.


ಕಾನದ ಯಶೋಧರ ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಹಿಂದೆ ಕುಳಿತಿದ್ದ ಕಾನ ಕಟ್ಟೆ ಬಳಿಯ ಕಿಶೋರ್ ಹಾಗೂ ಇನ್ನೊಂದು ವಾಹನದಲ್ಲಿ ಸಂಚರಿಸುತ್ತಿದ್ದ ಮುಕ್ಕ ಕಾಲೇಜೊಂದರ ವಿದ್ಯಾರ್ಥಿಗಳಾದ ಅಮನ್, ಮುಹಮ್ಮದ್ ಆದಿಲ್, ಮುಹಮ್ಮದ್ ತಫಾದ್ ಎಂಬವರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗಿನ ಜಾವ ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳ ಅತಿವೇಗದ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.


ಅಪಘಾತದ ರಭಸಕ್ಕೆ ಎರಡೂ ಬೈಕ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಶೋಧರ ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳೂರು: ಬೈಕ್ ಅಪಘಾತದಲ್ಲಿ ಮಹಿಳೆ ಮೃತ್ಯು

ಮಂಗಳೂರು: ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಬೈಕ್‌ನಲ್ಲಿದ್ದ ಸಹ ಸವಾರೆ ಮೃತಪಟ್ಟ ಘಟನೆ ನಗರದ ಹೊರವಲಯದ ನಾಟೆಕಲ್‌ನಲ್ಲಿ ಸಂಭವಿಸಿದೆ.


ಬೋಂದೇಲ್‌ನ ದೀಕ್ಷಿತ್ ಎಂಬವರ ಪತ್ನಿ ನಿಧಿ (29) ಸಾವನ್ನಪ್ಪಿದವರು. ದೀಕ್ಷಿತ್ ಮತ್ತು ನಿಧಿ ಮುಡಿಪುವಿನಲ್ಲಿ ನಡೆದ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸ್ ಆಗುವ ಸಂದರ್ಭದಲ್ಲಿ ನಾಟೆಕಲ್ ಬಳಿ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಬಡಿದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.


ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Indian news

Popular Stories