ಬೆಳ್ತಂಗಡಿ | ರಸ್ತೆಗೆ ಓಡಿಬಂದ ಮಗು ರಿಕ್ಷಾ ಢಿಕ್ಕಿಯಾಗಿ ಮೃತ್ಯು

ಬೆಳ್ತಂಗಡಿ: ಸೋಣಂದೂರಿನ ಪಣಕಜೆಯಲ್ಲಿ ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗುವಿಗೆ ರಿಕ್ಷಾತಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಘಟನೆ ಮಾ.16ರಂದು ಬೆಳಗ್ಗೆ ಸಂಭವಿಸಿದೆ.

ಪಣಕಜೆ ಮುಂಡಾಡಿ ನಿವಾಸಿ ಚಂದ್ರ ಶೇಖರ್‌ಮತ್ತು ಉಷಾ ದಂಪತಿಯ ಪುತ್ರ ಕೌಶಿಕ್‌ ಮೃತಪಟ್ಟ ಮಗು. ಮುಂಡಾಡಿಯಲ್ಲಿ ಚಂದ್ರಶೇಖರ್‌ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಓಡಿ ರಸ್ತೆಗೆ ಬಂತೆನ್ನಲಾಗುತ್ತಿದ್ದು, ಆದೇ ಸಮಯಕ್ಕೆ ಬಂದ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿತು.

ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories