ಬೆಳ್ತಂಗಡಿ: ನಾಪತ್ತೆಯಾಗಿದ್ದ ಆಟೋ ಚಾಲಕ ಕಾರ್ಕಳ ಗ್ರಾಮದ ಬಳಿ ಶವವಾಗಿ ಪತ್ತೆ

ಬೆಳ್ತಂಗಡಿ, ಜೂ.30: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ (35) ಕಾರ್ಕಳದ ನಲ್ಲೂರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುಧಾಕರ್ ಶುಕ್ರವಾರ ಜೂನ್ 28 ರಂದು ಆಟೋರಿಕ್ಷಾ ಚಲಾಯಿಸಿಕೊಂಡು ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಅವರ ಕುಟುಂಬ ಸದಸ್ಯರು ವ್ಯಾಪಕ ಹುಡುಕಾಟ ನಡೆಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಶನಿವಾರ ಕಾರ್ಕಳದ ನಲ್ಲೂರು ಸಮೀಪದ ಪಾದೆಗುಡ್ಡೆ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

Latest Indian news

Popular Stories