ದುರಸ್ತಿ ಕಾಮಗಾರಿ ಗುಂಡಿಗೆ ಬಿದ್ದ ಬೈಕ್ ಸವಾರ: ಪರಿಹಾರ ನೀಡಲು ಗುತ್ತಿಗೆದಾರನಿಗೆ ಮೇಯರ್ ಸೂಚನೆ

ಮಂಗಳೂರು: ನೀರು ಸರಬರಾಜು ಪೈಪ್ ದುರಸ್ತಿಗೆಂದು ತೆಗೆಯಲಾಗಿದ್ದ ರಸ್ತೆಯಲ್ಲಿನ ಹೊಂಡ ಮುಚ್ಚದ ಪರಿಣಾಮ ರಾತ್ರಿ ವೇಳೆ ಬೈಕ್ ಸವಾರನೋರ್ವ ಹೊಂಡಕ್ಕೆ ಬಿದ್ದಿದ್ದು ಪ್ರಾಣಾಪಾಯದಿಂದ‌ ಪಾರಾದ ಘಟನೆ ನಗರದ ವೆಲೆನ್ಸಿಯಾದಲ್ಲಿ ನಡೆದಿದೆ.

IMG 20231107 WA0005 Dakshina Kannada, Accident News, Crime

ಘಟನೆ ಬಳಿಕ ಗುತ್ತಿಗೆದಾರನ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ಚಿಕಿತ್ಸೆ ವೆಚ್ಚ, ಬೈಕ್‌ಗೆ ಉಂಟಾದ ಹಾನಿಯನ್ನು ಭರಿಸಲು ಗುತ್ತಿಗೆದಾರನಿಗೆ ಸೂಚಿಸಿದ್ದಾರೆ. ಇದಕ್ಕೆ ಗುತ್ತಿಗೆದಾರ ಒಪ್ಪಿದ್ದಾರೆಂದು ತಿಳಿದು ಬಂದಿದೆ.

Latest Indian news

Popular Stories