ದ.ಕ | ಯಾರೋ ಕೇಳುತ್ತಾರೆ ಎಂದು ರಾಜೀನಾಮೆ ಕೊಡಲು ಸಾಧ್ಯವಿಲ್ಲ: ಹರೀಶ್ ಕುಮಾರ್

ಮಂಗಳೂರು: ಯಾರೋ ಮನೆಯಲ್ಲಿ ಕುಳಿತು ವಾಟ್ಸ್ ಆಪ್ ಯುನಿವರ್ಸಿಟಿ ಮೂಲಕ ರಾಜೀನಾಮೆಗೆ ಒತ್ತಾಯಿಸುತ್ತಾರೆಂದು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತದ್ದು ನಿಜ. ಹಾಗಂತ ಈ ಹಿಂದೆಯೂ ಪಕ್ಷ ಸೋತಾಗ ಆಗಿನ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆಯೇ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿನಲ್ಲಿ ಎಲ್ಲರ ಪಾತ್ರವೂ ಇದೆ. ಹಾಗಂತ ರಾಜೀನಾಮೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಾನೇನೂ ಪಕ್ಷಕ್ಕೆ ಏಕಾ ಏಕಿ ಬಂದವನಲ್ಲ. ಪಕ್ಷದ ವಿವಿಧ ಸ್ಥರಗಳ‌ಲ್ಲಿ ಕೆಲಸ ಮಾಡಿ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಜಿಲ್ಲಾಧ್ಯಕ್ಷನಾಗಿದ್ದೇನೆ ಎಂದು ಅವರು ಹೇಳದರು.

ಯಾರೋ ಮನೆಯಲ್ಲಿ ಕುಳಿತು ಹೇಳುತ್ತಾರೆಂದು ನಾನು ರಾಜೀನಾಮೆ ಕೊಡುವುದಿಲ್ಲ. ಪಕ್ಷದ ಮುಖಂಡರು ಹೇಳಿದರೆ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹರೀಶ್ ಕುಮಾರ್ ಹೇಳಿದರು.

400ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ ಮೋದಿಯವರು 240ಕ್ಕೆ ಕುಸಿದಿದ್ದಾರೆ. 63 ಸೀಟುಗಳು ಬಿಜೆಪಿಗೆ ವೈಯಕ್ತಿಕವಾಗಿ ಕಡಿಮೆಯಾಗಿದೆ. ಇಡೀ ದೇಶದಲ್ಲಿ ಎಷ್ಟು ಬೂತ್ ಗಳಿವೆಯೋ ಅದರಲ್ಲಿ ಕನಿಷ್ಠ 10ಕಾರ್ಯಕರ್ತರನ್ನಾದರೂ ಕಾಂಗ್ರೆಸ್ ಹೊಂದಿದೆ. ಬಿಜೆಪಿಗೆ ಈ ರೀತಿ ಪ್ರತೀ ಬೂತ್ ಗಳಲ್ಲಿ ಕಾರ್ಯಕರ್ತರಿಲ್ಲ. ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿಯಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಗೆ ವಿರೋಧಪಕ್ಷದ ಸ್ಥಾನವನ್ನು ಕೊಡದ ರೀತಿಯ ದುರಹಂಕಾರದ ವರ್ತನೆಯನ್ನು ಪ್ರಧಾನಿ ತೋರಿದ್ದರು‌. ಈ ಬಾರಿ ಕಾಂಗ್ರೆಸ್ ಅಧಿಕೃತವಾಗಿ ವಿರೋಧಪಕ್ಷವಾಗಿ ಲೋಕಸಭೆಯಲ್ಲಿ ಕೆಲಸ ಮಾಡಲಿದೆ ಎಂದು ಹರೀಶ್ ಕುಮಾರ್ ಹೇಳಿದರು.

Latest Indian news

Popular Stories