ಕಡಬ: ಸಿಡಿಲು ಬಡಿದು ಒರ್ವ ಸಾವು: ಇಬ್ಬರಿಗೆ ಗಾಯ

ಕಡಬ: ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿಯಾಗಿದ್ದು, ಗಾಯಗೊಂಡವರೂ ಉತ್ತರ ಪ್ರದೇಶ ಮೂಲದವರೆಂದು ತಿಳಿದು ಬಂದಿದೆ.
ಇವರು ಕಡಬದಲ್ಲಿ ಮರಳು ತೆಗೆಯುವ ಕೆಲಸ ಮಾಡಿಕೊಂಡಿದ್ದರೆಂದು ತಿಳಿದು ಬಂದಿದೆ.

Latest Indian news

Popular Stories