ಮಂಗಳೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು, ಮೇ 26: ನಗರದ ವೆಲೆನ್ಸಿಯಾದ ಫೇಡ್ರೋಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ರಕ್ಷಿತ.ಎಸ್(19) ಎಂಬವರು ಮೇ 23ರಂದು ಕಾಣೆಯಾದ ಘಟನೆ ವರದಿಯಾಗಿದೆ.

ಕಂಕನಾಡಿಯ ಕೊಲಾಸೊ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಬಿಎಸ್ಸಿ ಮೊದಲನೇ ವರ್ಷದ ವಿದ್ಯಾರ್ಥಿನಿಯಾಗಿರುವ ರಕ್ಷಿತ ಅವರು ಮೇ 23ರಂದು ಬೆಳಗ್ಗೆ 8:30ಕ್ಕೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು ಕಾಲೇಜಿಗೆ ಹೋಗದೆ ಮತ್ತು ಮನೆಗೂ ವಾಪಸ್ ಬಾರದೆ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories