
Dakshina Kannada
ಮಂಗಳೂರು | ಸ್ಥಗಿತಗೊಂಡ ಅಪಾರ್ಟ್ಮೆಂಟ್ ಲಿಫ್ಟ್- ಐವರ ರಕ್ಷಣೆ
ಮಂಗಳೂರು: ಅರ್ಧದಲ್ಲಿಯೆ ಸ್ಥಗಿತಗೊಂಡ ಲಿಫ್ಟ್ನೊಳಗಿದ್ದ ಐವರನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ ಘಟನೆ ನಗರದ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದೆ.
ನಗರದ ಬೆಂದೂರಿನಲ್ಲಿರುವ ಶಿಲ್ಪ ಪ್ಯಾಲೇಸ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಐವರು ಯುವಕರು ಲಿಫ್ಟ್ನಲ್ಲಿ ಮೇಲಿನ ಮಹಡಿಗೆ ಹೋಗುತ್ತಿದ್ದ ವೇಳೆ ಲಿಫ್ಟ್ ಸ್ಥಗಿತಗೊಂಡಿದೆ. ಪರಿಣಾಮ ಲಿಪ್ಟ್ ನೊಳಗಿದ್ದ ಐವರು ಒಳಗೆ ಬಂಧಿಯಾಗಿದ್ದರು.
ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂರನೇ ಮಹಡಿಯಿಂದ ಒಂದನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಲಿಪ್ಟ್ ಎಳೆದು ಮೇಲೆ ತಂದಿದ್ದಾರೆ. ಆ ಮೂಲಕ ಐವರು ಯುವಕರನ್ನು ರಕ್ಷಿಸಿದ್ದಾರೆ.








