ಲೋಕಸಭೆ ಚುನಾವಣೆಗಾಗಿ ಗಣಿಧಣಿಗೆ ಬಿಜೆಪಿ ಗಾಳ

ಗಣಿಧಣಿ ಜನಾರ್ದನ ರೆಡ್ಡಿಗೆ ಪಕ್ಷಕ್ಕೆ ಮರಳಿ ಬರುವಂತೆ ಬಿಜೆಪಿಯ ಪ್ರಭಾವಿ ನಾಯಕರೊಬ್ಬರಿಂದ ಕರೆ ಬಂದಿದೆ ಎಂಬ ಮಾಹಿತಿ ರಾಜ್ಯರಾಜಕೀಯಲ್ಲಿ ಹರಿದಾಡುತ್ತಿದೆ. ಹೀಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.

ನಾನು ಸ್ವಂತ ಪಕ್ಷ ಬಿಟ್ಟು ಯಾವ ಪಕ್ಷಕ್ಕೂ ಬರಲ್ಲ. ಕೆಆರ್ಪಿಪಿ ಸಂಘಟಿಸುವುದಾಗಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ರೆಡ್ಡಿ ಆಪ್ತರೊಬ್ಬರಿಂದ ನ್ಯೂಸ್ಫಸ್ಟ್ಗೆ ಮಾಹಿತಿ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ರೆಡ್ಡಿ ಪ್ಲಾನ್ ಮಾಡಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಕೆಆರ್ಪಿಪಿ ಪಕ್ಷವನ್ನು ವಿಸರ್ಜಿಸುವುದಿಲ್ಲ ಎಂದು ತಿಳಿಸಿದ್ದಾರಂತೆ.

ನಾನು ಪಕ್ಷ ಕಟ್ಟಿರುವುದೇ ಪ್ರತ್ಯೇಕವಾಗಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ. 2024 ಲೋಕಸಭೆ ಹಾಗೂ 2028ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಅಂತ ಕೆಆರ್ಪಿಪಿ ಪ್ರಮುಖ ಕಾರ್ಯಕರ್ತರಿಗೆ ಸಂದೇಶವನ್ನು ರೆಡ್ಡಿ ನೀಡಿದ್ದಾರೆ ಎನ್ನಲಾಗಿದೆ. 2023 ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜನಾರ್ದನ್ ರೆಡ್ಡಿ ಕೆಆರ್ಪಿಪಿ ಪಕ್ಷವನ್ನು ಹುಟ್ಟುಹಾಕಿದ್ದರು.

ಕೆಆರ್ಪಿ ಪಕ್ಷದಿಂದ ರಾಜ್ಯದ ನಾನಾ ಭಾಗಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೆಡ್ಡಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಿಂದ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ, ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಕಣಕ್ಕಿಳಿಸಿ ಬಿಜೆಪಿಗೇ ಸೆಡ್ಡು ಹೊಡೆದಿದ್ದರು. ಸದ್ಯ ಲೋಕಸಭೆ ಚುನಾವಣೆ ಎದುರಾಗಿದೆ. ಈ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಜನಾರ್ದನ್ ರೆಡ್ಡಿಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ.

Latest Indian news

Popular Stories