ನಾಲ್ಕುವರೆ ತಿಂಗಳ ಮಗು ನೀರಿನಲ್ಲಿ ಮುಳುಗಿಸಿ ಯುವತಿ ಆತ್ಮಹತ್ಯೆ

ಮಂಗಳೂರು: ಮಹಿಳೆಯೋರ್ವಳು ತನ್ನ 4.5 ತಿಂಗಳ ಮಗುವನ್ನು ನೀರಲ್ಲಿ ಮುಳುಗಿಸಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಗುಜ್ಜರಕೆರೆಯ ಲೇಕ್ ವೀವ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಲೇಕ್ ವೀವ್ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ವಾಸವಾಗಿದ್ದ ಫಾತಿಮಾ ರುಕಿಯಾ (23) ಹಾಗೂ ಆಕೆಯ ಮಗು ಅಬ್ದುಲ್ಲಾ ಹೂದ್ ಘಟನೆಯಲ್ಲಿ ಮತಪಟ್ಟವರು.

ರುಕಿಯಾಳ ವಿವಾಹವು ಒಂದುವರೆ ವರ್ಷಗಳ ಹಿಂದೆ ನಡೆದಿದ್ದು, ಈ ವರ್ಷದ ಜುಲೈ 7ರಂದು ಗಂಡು ಮಗು ಜನಿಸಿತ್ತು. ಹೆರಿಗೆಯ ಬಳಿಕ ರುಕಿಯಾ ಮಾನಸಿಕ ಖನ್ನತೆಗೊಳಗಾಗಿದ್ದು, ಈ ನಿಟ್ಟಿನಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಅಲ್ಲದೇ
ಕೆಲವೊಮ್ಮೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಬಳಿ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೆ ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ರುಕಿಯಾ ತಾನು ವಾಸವಾಗಿದ್ದ ಫ್ಲಾಟ್‌ನಲ್ಲಿ ತನ್ನ ಮಗುವನ್ನು ಪ್ಲಾಸ್ಟಿಕ್ ಟಬ್‌ನಲ್ಲಿನ ನೀರಿಗೆ ಮುಳುಗಿಸಿ ಕೊಲೆಗೈದಿದ್ದು, ಬಳಿಕ ಕಿಟಕಿ ಸರಳಿಗೆ ಸೀರೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories