ಬಿಡಾಡಿ ದನಗಳಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್| ಮೂಕ ಪ್ರಾಣಿಗಳ ರೋಧನೆ ಕೇಳುವವರು ಯಾರು ?

ಬೀದರ್ : ನಗರದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಕಸಗಳು ಬಿಡಾಡಿ ದನಗಳಿಗೆ ಕಂಟಕವಾಗುತ್ತಿದ್ದು, ಪ್ಲಾಸ್ಟಿಕ್ ತಿಂದ ಹಸುಗಳು ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗುತ್ತಿವೆ.

ಬೀದರ್ ನಗರದ ಹಲವೆಡೆ ಸಾರ್ವಜನಿಕರು ಕಸ ಮುಸುರಿಯನ್ನ ಎಸೆಯುತ್ತಿದ್ದು, ಆಹಾರದ ಆಸೆಯಿಂದ ಕಸ ತಿನ್ನುತ್ತಿವೆ. ಕಸದ ಜೊತೆ ಇರುವ ಚಪ್ಪಲಿ, ಪ್ಲಾಸ್ಟಿಕ್ ಪೇಪರ್, ಕಬ್ಬಿಣದ ಪದಾರ್ಥಗಳನ್ನು ಹಸುಗಳ ಹೊಟ್ಟೆ ಸೇರುತ್ತಿರೊದರಿಂದ ಪ್ಲಾಸ್ಟಿಕ್ ಪಚೀನವಾಗದೇ ಪ್ರಾಣ ಕಳೆದುಕೊಳ್ಳುತ್ತಿವೆ. ತಿಂಗಳಿಗೆ ನಗರದಲ್ಲಿ 8-10 ಹಸುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಇತ್ತಿಚೆಗೆ ನಗರದಲ್ಲಿ ಹಸುವಿನ ಆಪರೇಷನ್ ನಡೆದಿದ್ದು, ಅದರ ಹೊಟ್ಟೆಯಲ್ಲಿ ಬರೊಬ್ಬರಿ 40 ಕೆಜಿ ತೂಕದ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಪ್ಲಾಸ್ಟಿಕ್‌‌ನಿಂದಾಗುವ ತೊಂದರೆಗೆ ನಿದರ್ಶನವಾಗಿದೆ. ನಗರನಿವಾಸಿಗಳು ಪ್ಲಾಸ್ಟಿಕ್ ಜೊತೆ ಆಹಾರ ಪದಾರ್ಥಗಳನ್ನ ಎಲ್ಲೆಂದರಲ್ಲಿ‌ ಎಸೆಯುತ್ತಿದ್ದಾರೆ. ಆಹಾರದ ಆಸೆಗೆ ಪ್ಲಾಸ್ಟಿಕ್ ತಿಂದ ಹಸುಗಳು ಸಾವನ್ನಪ್ಪುತ್ತಿವೆ. ಹೀಗಾಗಿ ನಗರಸಭೆ ಅಧಿಕಾರಿಗಳು ಕಸ ಎಸೆಯದಂತೆ‌ ಕ್ರಮ ತೆಗೆದುಕೊಂಡು ಪ್ರಾಣಿಗಳಿಗೆ ಕಂಟಕವಾಗ್ತಿರೋ ಕಸದಿಂದ ಮುಕ್ತಿ ನೀಡಬೇಕು ಎಂದು‌ ಸಾರ್ವಜನಿಕರು ಒತ್ತಾಯಿಸಿದ್ದಾರೆ..

ವರದಿ : ಹಣಮಂತ ದೇಶಮುಖ
THG ಬೀದರ್

Latest Indian news

Popular Stories