ಮಂಗಳೂರು: ಅನಧಿಕೃತ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ

ಮಂಗಳೂರು: ಅನಧಿಕತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಲ್ಯಾಬ್‌ಗಳ ಮೇಲೆ ದಾಳಿ ನಡೆಸಿರುವ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಅವುಗಳಿಗೆ ಬೀಗ ಜಡಿದಿದ್ದಾರೆ.

ನೋಂದಾವಣೆಯಾಗದೆ ಕಾರ್ಯಾಚರಿಸುತ್ತಿದ್ದ ಮೂಡುಶೆಡ್ಡೆಯ ಒಂದು ಕ್ಲಿನಿಕ್ ಹಾಗೂ ಪ್ರಯೋಗಾಲಯ ಮತ್ತು ಹಂಪನಕಟ್ಟೆಯ ಒಂದು ಕ್ಲಿನಿಕ್‌ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ನೋಂದಣಿ ಮಾಡದೇ ಮತ್ತು ನವೀಕರಿಸದೇ ಕಾರ್ಯಾಚರಿಸುತ್ತಿರುವ ಕ್ಲಿನಿಕ್ ಮತ್ತು ಲ್ಯಾಬ್‌ಗಳಿಗೆ ಒಂದು ವಾರಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯೊಳಗೆ ಸಂಬಂಧಿಸಿದ ಕ್ಲಿನಿಕ್, ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಾವಣೆ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಪಿಎಂಇ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಎಚ್ಚರಿಸಿದ್ದಾರೆ.

IMG 20231207 WA0004 Dakshina Kannada, Featured Story

Latest Indian news

Popular Stories