ಗಾಜಾ ಹತ್ಯಾಕಾಂಡಾದ ವಿರುದ್ಧ ಧ್ವನಿ ಎತ್ತಿದ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗಾಜಾದಲ್ಲಿ ನಿರಂತರ ಬಾಂಬ್ ದಾಳಿಯ ವಿರುದ್ಧ ಧ್ವನಿ ಎತ್ತಿದ್ದು, ಅಂತರರಾಷ್ಟ್ರೀಯ ಹಸ್ತಕ್ಷೇಪದ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ, ಗಾಝಾದ ಭೀಕರ ಪರಿಸ್ಥಿತಿಯನ್ನು ಉಲ್ಲೇಖಿಸಿದ್ದಾರೆ. ಕದನ ವಿರಾಮದ ನಂತರ ಹೆಚ್ಚು ತೀವ್ರವಾದ ಬಾಂಬ್ ದಾಳಿಯು ಆಹಾರದ ತೀವ್ರ ಕೊರತೆ, ವೈದ್ಯಕೀಯ ಸೌಲಭ್ಯಗಳ ನಾಶ ಮತ್ತು ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಿದೆ. ಹತರಾದ ಮುಗ್ಧ ಜೀವಗಳ ಸಂಖ್ಯೆ 16,000 ತಲುಪಿದೆ. 60 ಕ್ಕೂ ಹೆಚ್ಚು ಪತ್ರಕರ್ತರು ಮತ್ತು ನೂರಾರು ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಸುಮಾರು 10,000 ಮಕ್ಕಳು ಬಲಿಯಾಗಿದ್ದಾರೆ.

https://x.com/priyankagandhi/status/1732584914326073591?t=gXGsdZdgS8GDajmq1-gLNQ&s=08

ಈ ದುರಂತದ ಮಾನವೀಯ ಕಳಕಳಿಯನ್ನು ಪ್ರಿಯಾಂಕಾ ಗಾಂಧಿ ವ್ಯಕ್ತಪಡಿಸಿದ್ದು, ಕನಸುಗಳನ್ನು ಮತ್ತು ಆಕಾಂಕ್ಷೆಯನ್ನು ಹೊಂದಿರುವ ಜೀವಗಳು ಪ್ರಪಂಚದ ಕಣ್ಣುಗಳ ಮುಂದೆ ನಿರ್ದಯ ವಿನಾಶವನ್ನು ಎದುರಿಸುತ್ತಿದೆ. ನಮ್ಮ ಮಾನವೀಯತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಅಂತರರಾಷ್ಟ್ರೀಯ ವೇದಿಕೆಯಲ್ಲಿ ನ್ಯಾಯಕ್ಕಾಗಿ ಪ್ರತಿಪಾದಿಸುವ ಭಾರತದ ಇತಿಹಾಸದತ್ತ ಗಮನ ಸೆಳೆದ ಪ್ರಿಯಾಂಕಾ, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಅಂತ್ಯಗೊಳಿಸುವಲ್ಲಿ ದೇಶವು ಪ್ರಮುಖ ಪಾತ್ರ ವಹಿಸಿದೆ. ಸ್ವಾತಂತ್ರ್ಯಕ್ಕಾಗಿ ಪ್ಯಾಲೆಸ್ತೀನ್ ಹೋರಾಟವನ್ನು ಬೆಂಬಲಿಸುವಲ್ಲಿ ಅಚಲವಾಗಿದೆ ಎಂದು ನೆನಪಿಸಿದರು. ಆದರೆ, ನಡೆಯುತ್ತಿರುವ ನರಮೇಧದ ಸಂದರ್ಭದಲ್ಲಿ ಪ್ರಸ್ತುತ ನಿಷ್ಕ್ರಿಯತೆಯ ಬಗ್ಗೆ ಪ್ರಿಯಾಂಕಾ ವಿಷಾದಿಸಿದರು.

ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯನಾಗಿ ಭಾರತವು ತನ್ನ ಕರ್ತವ್ಯವನ್ನು ಪೂರೈಸಲು ಕರೆ ನೀಡಿದ ಪ್ರಿಯಾಂಕಾ, ಕದನ ವಿರಾಮಕ್ಕೆ ಅನುಕೂಲವಾಗುವಂತೆ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದರು. ಗಾಜಾದಲ್ಲಿ ತೆರೆದುಕೊಳ್ಳುತ್ತಿರುವ ದುರಂತ ಘಟನೆಗಳನ್ನು ತಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಮತ್ತು ಯಾವುದು ಸರಿಯೋ ಅದರ ಪರವಾಗಿ ನಿಲ್ಲುವುದು ಭಾರತದ ಜವಾಬ್ದಾರಿಯಾಗಿದೆ ಎಂದಿದ್ದಾರೆ.

Latest Indian news

Popular Stories