ಮಂಗಳೂರು: ಮಗಳ ಜೊತೆ ಆಸ್ಪತ್ರೆಗೆ ತೆರಳಿದ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉಳ್ಳಾಲ ವ್ಯಾಪ್ತಿಯ ಪೆರ್ಮನ್ನೂರು ಸಮೀಪದ ಮಂಚಿಲ ನಿವಾಸಿ ಫಾರೂಕ್ ಪಾಷಾ ಎಂಬವ ಪತ್ನಿ ಶಬಾನಾ(34) ನಾಪತ್ತೆಯಾದ ಮಹಿಳೆ.
ಜ.11ರಂದು ಸಂಜೆ 5 ಗಂಟೆಗೆ ಶಬಾನ ತನ್ನ ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುವುದಾಗಿ ಹೇಳಿದ್ದರು.
ಹೀಗೆ ಹೋದವರು ಮತ್ತೆ ಮನೆಗೆ ಮರಳಿ ಬಾರದೇ ನಾಪತ್ತೆ ಆಗಿದ್ದಾರೆ ಎಂದು ಅವರ ಗಂಡ ಫಾರೂಕ್ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.