Dakshina Kannada

ಖ್ಯಾತ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್‌ನ ನಾಯಕ ಅಕ್ಷಯ್ ಕಲ್ಲೇಗ ಹತ್ಯೆ

ಪುತ್ತೂರು: ಯುವಕನ ಬರ್ಬರ ಹತ್ಯೆ
ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ತಂಡವೊಂದು ಅಟ್ಟಾಡಿಸಿ ಕೊಲೆಗೈದ ಘಟನೆ ಪುತ್ತೂರು ಪೇಟೆಯ ಹೊರ ವಲಯದ ನೆಹರು ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಖ್ಯಾತ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್‌ನ ನಾಯಕ ಅಕ್ಷಯ್ ಕಲ್ಲೇಗ (26) ದುಷ್ಕರ್ಮಿಗಳಿಂದ ಹತ್ಯೆಯಾದವರು.
ಸೋಮವಾರ ಸಂಜೆ ಅಕ್ಷಯ್ ಮತ್ತು ತಂಡವೊಂದರ ನಡುವೆ ವಾಹನ ಅಪಘಾತದ ವಿಚಾರವಾಗಿ ವಾಗ್ವದ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ಮಾತನಾಡಲೆಂದು ಮತ್ತೆ ಅಕ್ಷಯ್‌ನನ್ನು ನೆಹರು ನಗರಕ್ಕೆ ಕರೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹತ್ಯೆ ನಡೆಸಿದ ತಂಡದಲ್ಲಿ ಮೂವರು ಇದ್ದರೆಂದು ತಿಳಿದು ಬಂದಿದ್ದು, ಇಬ್ಬರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button