ಪಣಂಬೂರು: ಕೊಲೆ ಆರೋಪಿಯ ಸೆರೆ

ಪಣಂಬೂರು: ಬೈಕಂಪಾಡಿ ಎಪಿಎಂಸಿ ಕಟ್ಟಡದ ಬಳಿ ನಡೆದ ಕೊಲೆ ಪ್ರಕರಣದ ಆರೋಪಿ ಕೇರಳದ ಮನು ಸೆಬಾಸ್ಟಿಯನ್‌(33) ನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಆ. 17ರಂದು ಸಂದೇಹಾಸ್ಪದ ಮೃತ ಸ್ಥಿತಿಯಲ್ಲಿ 45 ವರ್ಷ ಪ್ರಾಯದ ಓರ್ವನ ಶವ ಪತ್ತೆಯಾಗಿತ್ತು. ಮೈಯಲ್ಲಿ ಗಾಯದ ಗುರುತು ಕಂಡು ಬಂದು ಕೊಲೆ ಶಂಕೆಯಲ್ಲಿ ತನಿಖೆ ಮುಂದುವರಿಸಿದಾಗ ಕಣ್ಣೂರಿನ ನಿವಾಸಿ ಮನು ಸೆಬಾಸ್ಟಿಯನ್‌ ಬಲೆಗೆ ಬಿದ್ದಿದ್ದಾನೆ.

Latest Indian news

Popular Stories