ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಗೊತ್ತಿಲ್ಲ, ಆದರೆ ನಿಮ್ಮ ಟೈಲರ್‌ಗೆ ಕೆಲಸ ಕೊಟ್ಟಿದ್ದೀರಿ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಮಂಗಳೂರು: ನೀವು ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ದಿನಕ್ಕೆ ಐದು ಬಟ್ಟೆ ಬದಲಾಯಿಸುವ ಮೂಲಕ ನಿಮ್ಮ ಟೈಲರ್‌ಗೆ ಕೆಲಸ ಕೊಟ್ಟಿದ್ದೀರಿ ಎಂದು ಬಹುಭಾಷಾ ನಟ‌ ಪ್ರಕಾಶ್ ರಾಜ್
ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘420’ಗಳು ಈ ಬಾರಿ ನಾವು 400 ದಾಟುತ್ತೇವೆ ಎಂದು ಹೇಳ್ತಾರೆ. ಇದು ಅಹಂಕಾರ ಅಲ್ವಾ ಎಂದು ಪ್ರಶ್ನಿಸಿದರು.
ಮೋದಿ ಹೊಸ ಘೋಷಣೆಯೊಂದಿಗೆ ಬಂದಿದ್ದಾರೆ. ಮೋದಿ ಪರಿವಾರದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ. ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಇವರ ಪರಿವಾರ ಎಂದು ಆರೋಪಿಸಿದರು.

ಇಲೆಕ್ಟ್ರಲ್ ಬಾಂಡ್‌ನಲ್ಲಿ ಭಾರೀ ದೊಡ್ಡ ಹಗರಣವಾಗಿದೆ. ಈ ಬಗ್ಗೆ ನರೇಂದ್ರ ಮೋದಿ ಯಾಕೆ ಮನ್‌ಕಿ ಬಾತ್‌ನಲ್ಲಿ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Latest Indian news

Popular Stories