ಕೂಜಿಮಲೆಯಲ್ಲಿ ನಕ್ಸಲರ ಪತ್ತೆ: ಎಎನ್ಎಫ್ ತಂಡದಿಂದ ಕೂಂಬಿಂಗ್ ಆರಂಭ

ಸುಳ್ಯ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಗಡಿ ಭಾಗದ ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆಂದು ಮಾಹಿತಿ ಹಬ್ಬಿದ್ದು, ಈ ನಿಟ್ಟಿನಲ್ಲಿ ಆಗಮಿಸಿದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ಕೂಂಬಿಂಗ್ (ನಿಗ್ರಹ ಕಾರ್ಯಾಚರಣೆ) ಆರಂಬಿಸಿದೆ.

ಈ ಭಾಗದಲ್ಲಿ ಶನಿವಾರ ಸಂಜೆ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ್ದು, ಅಂಗಡಿಯೊಂದರಿಂದ ಸಾವಿರರೂ ರೂ. ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿತ್ತು ಎಂದು ಹೇಳಲಾಗಿತ್ತು.

IMG 20240318 WA0065 Dakshina Kannada, Featured Story

ಕಾರ್ಕಳದಿಂದ ಆಗಮಿಸಿದ ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶಕ್ಕೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದಾರೆ.
ಶಂಕಿತ ನಕ್ಸಲರ ತಂಡದಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗುತಿದ್ದು, ಸಶಸ್ತ್ರಧಾರಿಗಳಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

Latest Indian news

Popular Stories