
“ಒಡೆಯೋಣ, ನಮ್ಮ ನಡುವಿನ ಗೋಡೆಯನ್ನು” ಎಸ್.ಐ.ಓ ನಿಂದ ರಥಯಾತ್ರೆ
41 ವರ್ಷದ ಮುಂಚೆ SIO ಆರಂಭಿಸುವಾಗ ಉತ್ತಮ ಸಮಾಜಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಸಮಾಜದ ಆಸ್ತಿಯಾಗಿ ಸಿದ್ಧಪಡಿಸುವ ದೃಢ ಪ್ರತಿಜ್ಞೆ ತೆಗೆದುಕೊಂಡಿತು. ಇದೀಗ SIO ದಕ್ಷಿಣ ಕನ್ನಡ ಜಿಲ್ಲೆಯು ನಿಮ್ಮ ಮುಂದೆ ಬರುತ್ತಿರುವ ನಮ್ಮ ಈ ರಥ ತನ್ನ ಈ ಪ್ರತಿಜ್ಞೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದೆ. SIO ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಜೀವನವನ್ನು ಪುನರ್ ನಿರ್ಮಾಣ ಮಾಡಲು ಸಹಕರಿಸುವ ಮೂಲಕ ದುಷ್ಟರ ವಿರುದ್ಧ ಹೋರಾಡಲು ನೈತಿಕತೆ ಮತ್ತು ವಿಚಾರದ ಜ್ಯೋತಿ ಸಮಾಜದಲ್ಲಿ ಬೆಳಗಲು ನಿಜವಾದ ಜ್ಞಾನ ಮತ್ತು ಜಾಗೃತಿಯನ್ನು ನೀಡಲು ಬದ್ಧವಾಗಿದ್ದು ಅದಕ್ಕಾಗಿ ನಿರಂತರ ಶ್ರಮಿಸುತ್ತಿದೆ. ದ್ವೇಷ ಭಾಷಣ ಇಂದು ನಮ್ಮ ಭಾರತದಲ್ಲಿ ದಿನನಿತ್ಯದ ಸಾಮಾನ್ಯ ವಿಷಯವಾಗಿದೆ ಮತ್ತು ದೇಶದ ವಿವಿಧ ಪ್ರದೇಶಗಳಲ್ಲಿ ದ್ವೇಷದ ಅಪರಾಧಗಳು ವರದಿಯಾಗುತ್ತದೆ. ಕೆಲವು ವರ್ಷಗಳಿಂದ ನಮ್ಮ ರಾಷ್ಟ್ರದ ಜಾತ್ಯತೀತ ಸ್ವರೂಪವು ಬಾರಿ ಪ್ರಮಾಣದಲ್ಲಿ ಕೋಮುವಾದದೊಂದಿಗೆ ರಾಜಿಯಾಗಿದೆ. ಜನರ ಮನಸ್ಸಿನಲ್ಲಿ ಕೋಮುವಿಷ ತುಂಬುಲಾಗುತ್ತಿದೆ, ನಮ್ಮ ರಾಜ್ಯದ ಜಾತ್ಯಾತೀತ ಪರಂಪರೆಗೆ ಸಮಸ್ಯೆಯಾಗಿರುವ ರಾಜ್ಯದ ಜಾತ್ಯತೀತ ವಿರೋಧಿ ಶಕ್ತಿಗಳು, ನೈತಿಕ ಪೊಲೀಸ್ ಗಿರಿ, ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ದ್ವೇಷವನ್ನು ಹರಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇದರ ವಿರುದ್ಧವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ “ಒಡೆಯೋಣ, ನಮ್ಮ ನಡುವಿನ ಗೋಡೆಯನ್ನು” ಎಂಬ ಧ್ಯೇಯವಾಕ್ಯದೊಂದಿಗೆ ಸಂಚರಿಸುವ ರಥಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ರಥಯಾತ್ರೆಯು ಡಿಸೆಂಬರ್ 21 ರಿಂದ 24 ರವರೆಗೆ ಸಂಚರಿಸಲಿದೆ. ರಥಯಾತ್ರೆಯಲ್ಲಿ ಈ ವಿಷಯದ ಮೇಲೆ ಬೀದಿ ನಾಟಕಗಳನ್ನು ಪ್ರದರ್ಶಿಸಲಿದೆ. ವಿಭಜಕ ಶಕ್ತಿಗಳು ಏನೇ ಮಾಡಲಿ, ತುದಿಗಾಲಲ್ಲಿ ನಿಂತರು ನೈತಿಕ ಮೌಲ್ಯಗಳು ಉತ್ತುಂಗದಲ್ಲಿರುವ ಜಾತ್ಯಾತೀತ ಸಮಾಜವಾಗಿ ನಾವು ಯಾವಾಗಲೂ ಜಯಿಸುತ್ತೇವೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ.
ದ್ವೇಷದ ವಿನಾಶಕಾರಿ ಪರಿಣಾಮವು ದುಃಖಕರವಾಗಿದೆ ಅದರಲ್ಲಿ ಹೊಸತೇನಿಲ್ಲ. ಅದರ ಪ್ರಮಾಣ ಮತ್ತು ಪ್ರಭಾವವು ಇಂದು ಸಾಮಾಜಿಕ ಮಾಧ್ಯಮದಿಂದ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಎಂದರೆ ಜಾಗತಿಕ ಮಟ್ಟದಲ್ಲಿ ದ್ವೇಷ ಭಾಷಣದ ವಾಕ್ಚಾತುರ್ಯ ವಿಭಜಕ ಸಿದ್ದಾಂತಗಳನ್ನು ಹರಡುವ ಒಂದು ಸಾಮಾನ್ಯ ವಿಧಾನವಾಗಿದೆ. ಇದನ್ನು ನಿಯಂತ್ರಿಸದೆ ಬಿಟ್ಟರೆ ದ್ವೇಷದ ಭಾಷಣವು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಹಾನಿಯುಂಟು ಮಾಡುತ್ತದೆ ಏಕೆಂದರೆ ಇದು ಸಂಘರ್ಷಗಳನ್ನು ಮತ್ತು ವ್ಯಾಪಕ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ. ದ್ವೇಷದ ಭಾಷಣವು ಸಹಿಷ್ಣುತೆ ವೈವಿಧ್ಯತೆ ಮತ್ತು ಮಾನವ ಹಕ್ಕುಗಳ ನಿಯಮಗಳ ಮತ್ತು ತತ್ವಗಳ ಮೂಲತತ್ವದ ಮೌಲ್ಯಗಳ ನಿರಾಕರಣೆಯಾಗಿದೆ. ಇದು ತಾರತಮ್ಯ ರಾಷ್ಟ್ರದ ಶಕ್ತಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ ನಾವು ನಮ್ಮ ವೈವಿಧ್ಯಗಳನ್ನು ಅಳವಡಿಸಿಕೊಳ್ಳಬೇಕು. ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡುವ ಒಂದು ಘಟಕವಾಗಿ ಕಾರ್ಯನಿರ್ವಹಿಸಬೇಕು ಶಾಂತಿ ಮತ್ತು ಸಮೃದ್ಧಿಯ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಎಸ್.ಐ.ಓ ದಕ್ಷಿಣ ಕನ್ನಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.




