ಮಣಿಪಾಲ: ಕೋಳಿ ಅಂಕಕ್ಕೆ ದಾಳಿ: 80 ಬಡಗಬೆಟ್ಟು ಗ್ರಾಪಂ ಸದಸ್ಯ ಸೇರಿದಂತೆ 11 ಮಂದಿ ಬಂಧನ

ಮಣಿಪಾಲ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 80 ಬಡಗಬೆಟ್ಟು ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ ಸಹಿತ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ.

ಹಿರೇಬೆಟ್ಟು ಗ್ರಾಮದ ದೂಮವತಿ ದೈವಸ್ಥಾನದ ಹತ್ತಿರ ಕಬ್ಯಾಡಿ ಕಂಬಳ ಗದ್ದೆಯ ಬಳಿ ಡಿ.18ರಂದು ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ನಡೆಸುತ್ತಿರುವ ಕುರಿತ ಮಾಹಿತಿಯಂತೆ ಮಣಿಪಾಲ ಎಸ್ಸೈ ರಾಘವೇಂದ್ರ ಸಿ. ನೇತೃತ್ವದ ತಂಡ ದಾಳಿ ನಡೆಸಿ, ಬಿಜೆಪಿ ಮುಖಂಡ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಎಂಬವರು ಬಂಧಿಸಿದೆ.

ಬಂಧಿತರಿಂದ 5,450ರೂ. ಮೌಲ್ಯದ 10 ಹುಂಜ ಹಾಗೂ ಆಟಕ್ಕೆ ಬಳಸಿದ ನಗದು 2800ರೂ. ಮತ್ತು ಕೋಳಿ ಬಾಳ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories