ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಮೀಪ ಮಣ್ಣು ಕುಸಿದು ಇಬ್ಬರು ಮಣ್ಣಿನಡಿ ಸಿಲುಕಿರುವ ಘಟನೆ ನಗರದ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.
ಕಾಮಗಾರಿ ವೇಳೆ ಮಣ್ಣು ಏಕಾ ಏಕಿ ಕುಸಿದಿದ್ದು, ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಮಣ್ಣಿನ ಅಡಿ ಸಿಲುಕಿದ್ದರೆಂದು ತಿಳಿದು ಬಂದಿದೆ.
ಮಣ್ಣಿನಡಿ ಸಿಲುಕಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗುತ್ತಿದೆ. ರಕ್ಷಣಾ ತಂಡ ಇಬ್ಬರೂ ಕಾರ್ಮಿಕರನ್ನು ಹೊರತೆಗೆಯಲು ಕಾರ್ಯಾಚರಣೆ ನಿರತವಾಗಿದೆ.