ಉಳ್ಳಾಲ: ರೈಲು ಢಿಕ್ಕಿಯಾಗಿ ಯುವಕ ಮೃತ್ಯು

ಉಳ್ಳಾಲ: ಯುವಕನೋರ್ವ ರೈಲು ಢಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಸಂಭವಿಸಿದೆ.

ಉಚ್ಚಿಲ ರೈಲ್ವೇ ಗೇಟ್ ಬಳಿಯ ನಿವಾಸಿ ಜಾಫರ್ (22) ಮೃತಪಟ್ಟ ಯುವಕನಾಗಿದ್ದು, ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಜಾಫರ್ ತಮ್ಮ ಮನೆ ಕಡೆಗೆ ತಡರಾತ್ರಿ ಬರುತ್ತಿದ್ದ ವೇಳೆ ರೈಲ್ವೇ ಹಳಿಯನ್ನು ದಾಟುತ್ತಿದ್ದರು. ಆಗ ರೈಲು ಢಿಕ್ಕಿಯಾಗಿ ಅವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತಪಟ್ಟ ಜಾಫರ್ ಸಹೋದರ ಸೌದಿ ಅರೇಬಿಯಾದಲ್ಲಿದ್ದರು. ಆದ್ದರಿಂದ ಜಾಫರ್ ಕೂಡಾ ಸೌದಿಗೆ ಬರುವುದಕ್ಕೆ ವೀಸಾ ಕಳಿಸಿದ್ದರು. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ ಬಂದಿದ್ದ ಜಾಫರ್ ಫೆ.14ಕ್ಕೆ ಸೌದಿ ಅರೇಬಿಯಾಕ್ಕೆ ತೆರಳಲಿದ್ದರು.

Latest Indian news

Popular Stories