ಯು.ಟಿ ಖಾದರ್ ಸೋಲಿಸಲು ಹೆಣೆದ ತಂತ್ರ ವಿಫಲ; ಬಿಜೆಪಿ, ಎಸ್.ಡಿ.ಪಿ.ಐಗೆ ಮುಖಭಂಗ?

ಮಂಗಳೂರು: ಈ ಬಾರಿಯ ವಿಧಾನ ಸಭಾ ಚುನಾವಣೆ ಉಳ್ಳಾಲ ಕ್ಷೇತ್ರ ಹೆಚ್ಚು ಚರ್ಚೆಯಲ್ಲಿತ್ತು. ಕಾಂಗ್ರೆಸ್ ಅಭ್ಯರ್ಥಿ ಯುಟಿ ಕಾದರ್ ಅವರನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಾಲ ಮತ್ತು ಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ತೀವ್ರ ಪ್ರಯತ್ನ ನಡೆಸಿದ್ದರು.

ಎರಡು ಪಕ್ಷಗಳು ಕಾಂಗ್ರೆಸ್’ನ ಪ್ರಬಲ ಅಭ್ಯರ್ಥಿ ಯುಟಿ ಕಾದರ್ ಸೋಲಿಸಲು ನಾನಾ ತಂತ್ರಗಾರಿಕೆ ನಡೆಸಿದ್ದರು. ಉಳ್ಳಾಲ ಕ್ಷೇತ್ರದ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ಕೂಡ ವಾಗ್ವಾದ, ಚರ್ಚೆ ವ್ಯಾಪಕವಾಗಿ ನಡೆದಿತ್ತು. ಅದೆಲ್ಲವನ್ನೂ ಯಶಸ್ವಿಯಾಗಿ ಮೆಟ್ಟಿ ನಿಂತಿರುವಂತೆ ಕಾಣಿರುವ ಯುಟಿಕೆ ಗೆಲುವಿನ ಮುನ್ಸೂಚನೆ ನೀಡಿದ್ದಾರೆ. ಈವರೆಗಿನ ಸಮೀಕ್ಷೆಯ ಪ್ರಕಾರ ಯುಟಿ ಕಾದರ್ 15-25 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಎನ್ನಲಾಗಿದೆ.

ಈ ಕ್ಷೇತ್ರದಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಅವರು ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರು.

Latest Indian news

Popular Stories