ನಳಿನ್ ಕುಮಾರ್ ಕಟೀಲ್‌ರನ್ನು ಬದಲಾಯಿಸಿದ್ದು ಯಾಕೆ?: ರಮಾನಾಥ್ ರೈ ಟಾಂಗ್ ಕೊಟ್ಟದ್ದು ಹೀಗೆ

ಮಂಗಳೂರು: ದಕ್ಷಿನ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ತನ್ನ ಹಾಲಿ ಸಂಸದರನ್ನು ಬದಲಾಯಿಸಿದೆ. ನಂಬರ್ 1 ಸಂಸದರೆಂದು ಹೇಳಿಕೊಂಡು ತಿರುಗುತ್ತಿದ್ದವರನ್ನು ಬದಲಾಯಿಸುವ ಅಗತ್ಯ ಇತ್ತೇ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕೆಲಸ ಮಾಡಲು ಅನ್ ಫಿಟ್ ಎಂಬ ಕಾರಣಕ್ಕೆ ಅವರನ್ನು ಬದಲಾಯಿಸಲಾಗಿದೆ. ಇದರಿಂದ ಬಿಜೆಪಿ ಜಿಲ್ಲೆಯಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟ ಎಂದು ಹೇಳಿದರು.

ದ.ಕ.ಜಿಲ್ಲೆಯ ಓರ್ವ ಉತ್ತಮ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಕೆಲ ಆರ್ಥಿಕ ಸದೃಢ ಪಕ್ಷಕ್ಕೆ ದೇಶದ ಕಾಳಜಿಗಿಂತ ಚುನಾವಣಾ ಕಾಳಜಿಯೇ ಹೆಚ್ಚು. ಆದ್ದರಿಂದ ಅವರು ಅಭ್ಯರ್ಥಿ ಘೋಷಣೆ ಬೇಗ ಮಾಡುತ್ತಾರೆ. ಅವರಿಗೆ ಅಭಿವೃದ್ಧಿ, ದೇಶದ ಭವಿಷ್ಯದ ಬಗ್ಗೆ ಚಿಂತನೆಯಿಲ್ಲ‌ ಎಂದು ಆರೋಪಿಸಿದರು.

ಬಡವರು, ದುರ್ಬಲ ವರ್ಗದವರಿಗೆ ರಕ್ಷಣೆ ಇರುವುದು ಸಂವಿಧಾನದಿಂದ. ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಕಾಂಗ್ರೆಸ್ ಗೆ ಮತ ಹಾಕಬೇಕು. ಸಂವಿಧಾನದ ರಕ್ಷಣೆ ಮಾಡಿದರೆ, ಅದು ಜನರನ್ನು ರಕ್ಷಿಸುತ್ತದೆ. ಆದ್ದರಿಂದ ಮುಂದೆ ಬರುವ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ ಆಗಿದ್ದು, ಜನತೆ ಕಾಂಗ್ರೆಸ್ ಗೆ ಮತ ಚಲಾಯಿಸಬೇಕು ರಮಾನಾಥ ರೈ ಹೇಳಿದರು.

Latest Indian news

Popular Stories