ದಾವಣಗೆರೆ: ಸರಣಿ ಅಪಘಾತ ಸಂಭವಿಸಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ ವೃತ್ತದಲ್ಲಿ ಜೂ. 19ರ ಬುಧವಾರ ಬೆಳಗ್ಗೆ ನಡೆದಿದೆ.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಚಲಾಯಿಸುತ್ತಿದ್ದ ಕಾರು ಮೊದಲು ಬೈಕ್ ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದಲ್ಲಿರುವ ಕಾರ್ ಶೋರೂಂಗೆ ನುಗ್ಗಿದೆ.
ಈ ಪರಿಣಾಮ ಮಣಿ ಸರ್ಕಾರ್ ಗಾಯಗೊಂಡಿದ್ದು, ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಬೈಕ್ ಸವಾರ ಸಹ ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಸವಾರನ ವಿವರ ತಿಳಿದು ಬರಬೇಕಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.