ದಾವಣಗೆರೆ : ನನ್ನ ತಂದೆ ಚರ್ಚ್ಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಹಾಗೂ ನನಗಿಂತ ಚಿಕ್ಕ ಮಯಸ್ಸಿನ ಯುವತಿ ಜೊತೆ ಮದುವೆಯಾಗಲು ಹೊರಟಿದ್ದಾರೆ ಎಂದು ಮಗಳೋಬ್ಬಳು ಚರ್ಚ್ ಪಾದ್ರಿಯಾಗಿರುವ ತಂದೆಯ ವಿರುದ್ಧವೆ ಗಂಭೀರ ಆರೋಪ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು ದಾವಣಗೆರೆ ಜಯನಗರ ಚರ್ಚ್ನ ಪಾದ್ರಿ ಪಿ ರಾಜಶೇಖರ್ (58) ವಿರುದ್ಧ ಇದೀಗ ಇಂತಹ ಆರೋಪ ಕೇಳಿ ಬಂದಿದೆ. ಅಲ್ಲದೆ ಪಾದ್ರಿ ಪುತ್ರಿ ಡೈಸಿ ಪ್ರಿಯಾ ತನ್ನ ತಂದೆ ವಿರುದ್ಧವೇ ಇಂತಹ ಅರೋಪ ಮಾಡಿದ್ದಾರೆ. ನನ್ನ ತಂದೆ ಈಗ ನನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಚರ್ಚ್ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಡೈಸಿ ಪ್ರಿಯಾ ಆರೋಪ ಮಾಡಿದ್ದಾರೆ.
6 ಜನ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸ್ವತಃ ಅವರ ಮಗಳೇ ಹೇಳಿಕೊಂಡಿದ್ದಾಳೆ. ಪಾದ್ರಿ ರಾಜಶೇಖರ್ ವರ್ತನೆ ಬಗ್ಗೆ ನನ್ನ ಬಳಿ ಮಹಿಳೆಯರು ಸಂಕಟ ತೋಡಿಕೊಂಡಿದ್ದರು. ಓರ್ವ ಶಿಕ್ಷಕಿಗೂ ನನ್ನ ತಂದೆ ಅನ್ಯಾಯ ಮಾಡಿದ್ದಾರೆ. ಅವರ ಬಾಳಲ್ಲೂ ಆಟ ಆಡಿದ್ದಾರೆ ಎಂದು ಡೈಸಿ ಪ್ರಿಯಾ ಅವರು ಆರೋಪಿಸಿದ್ದಾರೆ.
ಮತ್ತೊಂದೆಡೆ ಪಾದ್ರಿ ರಾಜಶೇಖರ್ ವಿರುದ್ದ ದೂರು ಕೊಡೋದಕ್ಕೆ ದಾವಣಗೆರೆ ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ. ಚರ್ಚ್ ನ ಮುಖ್ಯಸ್ಥರಾಗಿದ್ದು ಕೊಂಡವರಿಂದಲೇ ಇಂತಹ ವರ್ತನೆಗಳನ್ನು ಕ್ರಿಶ್ಚಿಯನ್ ಸಮಾಜ ಸಹಿಸುವುದಿಲ್ಲ. ಮಹಿಳೆ ಜೀವನದ ಜೊತೆ ಆಟವಾಡುವ ರಾಜಶೇಖರ್ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ.