ಭಾರತದ ಬಾಹ್ಯ ಸಾಲ 629 ಬಿಲಿಯನ್ ಡಾಲರ್ ಗಳಿಗೆ ಏರಿಕೆ

ಮುಂಬೈ: ಭಾರತದ ಬಾಹ್ಯ ಸಾಲ 2023 ರ ಜೂನ್ ಅಂತ್ಯದ ವರೆಗೂ 629.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಆದರೆ ಸಾಲ-ಜಿಡಿಪಿ ಅನುಪಾತ ಕುಸಿತಗೊಂಡಿದೆ ಎಂದು ಆರ್ ಬಿಐ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಮಾರ್ಚ್ ಅಂತ್ಯದ ವೇಳೆಗೆ 624.3 ಬಿಲಿಯನ್ ಡಾಲರ್ ಇದ್ದ ಸಾಲ 4.7 ಬಿಲಿಯನ್ ನಷ್ಟು ಏರಿಕೆಯಾಗಿದೆ. ಮಾ.2023 ರ ಅಂತ್ಯದಲ್ಲಿ ಶೇ.18.8 ರಷ್ಟಿದ್ದ ಬಾಹ್ಯ ಸಾಲದಿಂದ ಜಿಡಿಪಿ ಅನುಪಾತ 18.6 ಕ್ಕೆ ಕುಸಿತ ಕಂಡಿದೆ.

ಪ್ರಮುಖ ಕರೆನ್ಸಿಗಳಾದ ಯೆನ್ ಮತ್ತು ಎಸ್‌ಡಿಆರ್‌ಗೆ ಹೋಲಿಸಿದರೆ US ಡಾಲರ್‌ನ ಮೌಲ್ಯವರ್ಧನೆಯ ಪರಿಣಾಮವು $3.1 ಶತಕೋಟಿಯಷ್ಟಿದೆ.

ಅಮೇರಿಕಾ ಡಾಲರ್ ಮೌಲ್ಯದ ಸಾಲವು ಭಾರತದ ಬಾಹ್ಯ ಸಾಲದ ಅತಿದೊಡ್ಡ ಅಂಶವಾಗಿ ಉಳಿದಿದೆ, ಜೂನ್ 2023 ರ ಅಂತ್ಯದ ವೇಳೆಗೆ 54.4 ಶೇಕಡಾ ಪಾಲನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಭಾರತೀಯ ರೂಪಾಯಿ (30.4 ಶೇಕಡಾ), SDR (5.9 ಶೇಕಡಾ), ಯೆನ್ ( 5.7 ಶೇಕಡಾ), ಮತ್ತು ಯೂರೋ (3.0 ಶೇಕಡಾ) ಗಳಲ್ಲಿ ಭಾರತದ ಸಾಲ ಇದೆ.

Latest Indian news

Popular Stories