ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ನಾಗೂರಿನ ಸಂದೀಪನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಸಮೀರ್ 618 ಅಂಕಗಳನ್ನು ಗಳಿಸಿದ್ದಾರೆ.
ಕನ್ನಡದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದಿರುವ ಅವರು, ಇಂಗ್ಲಿಷ್ ನಲ್ಲೂ 100 ಕ್ಕೆ 100 ಅಂಕ ಪಡೆದು ಸಾಧನೆಗೈದಿದ್ದಾರೆ.
ಅಮೀರ್ ನಾಗೂರ್ ಮತ್ತು ಶುಗುಫ್ತಾ ದಂಪತಿಯ ಪುತ್ರರಾದ ಮುಹಮ್ಮದ್ ಸಮೀರ್ ವೈದ್ಯನಾಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.