ಅಲ್-ಅಮೀನ್ ಶೈಕ್ಷಣಿಕ ಚಳವಳಿಯ ಸ್ಥಾಪಕ ಡಾ.ಮುಮ್ತಾಜ್ ಅಹ್ಮದ್ ಖಾನ್ ಇನ್ನಿಲ್ಲ

ಅಲ್-ಅಮೀನ್ ಶೈಕ್ಷಣಿಕ ಚಳವಳಿಯ ಸ್ಥಾಪಕ ನೂರಾರು ಶಿಕ್ಷಣ ಸಂಸ್ಥೆಗಳ ಮಾಲಕ ಡಾ.ಮುಮ್ತಾಜ್ ಅಹ್ಮದ್ ಖಾನ್ ನಿನ್ನೆ ರಾತ್ರಿ 12 ಗಂಟೆಗೆ ನಿಧನರಾದರು.
ಅವರಿಗೆ 88 ವರ್ಷ ವಯಾಸ್ಸಾಗಿತ್ತು. ಶುಕ್ರವಾರದ (ಇಂದು) ಪ್ರಾರ್ಥನೆಯ ನಂತರ, ಬೆಂಗಳೂರಿನ ಹೊಸಕೋಟೆಯಲ್ಲಿರುವ ಅಲ್-ಅಮೀನ್ ವಸತಿ ಶಾಲೆಯಲ್ಲಿ ಜನಾಝ ನಮಾಜ್ ಮಾಡಲಾಗುವುದು ಎಂದು ಅವರ ಸ್ನೇಹಿತರಾದ ಕಲೀಮುಲ್ ಹಫೀಜ್ ತಿಳಿಸಿದ್ದಾರೆ.

1966 ರಲ್ಲಿ ಅವರು ಅಲ್-ಅಮೀನ್ ಶೈಕ್ಷಣಿಕ ಸಮೂಹ ಸಂಸ್ಥೆಯನ್ನು ಸ್ಥಾಪಿಸಿದರು.
ಡಾ.ಮುಮ್ತಾಜ್ ಅಹ್ಮದ್ ಖಾನ್ 1964 ರಲ್ಲಿ ಪ್ರಾರಂಭವಾದ ಬೆಂಗಳೂರಿನ ಉರ್ದು ದಿನಪತ್ರಿಕೆ ‘ಸಲಾರ್’ ನ ಸಂಸ್ಥಾಪಕರಲ್ಲಿ ಒಬ್ಬರು;
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990), ಕೆಂಪೇಗೌಡ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಡಾ. ಸಾಹಿಬ್ ಅವರ ನಿಧನವು ರಾಷ್ಟ್ರಕ್ಕೆ ಮಾತ್ರವಲ್ಲ, ನನ್ನ ವೈಯಕ್ತಿಕ ಜೀವನಕ್ಕೂ ನಷ್ಟವಾಗಿದೆ ಎಂದು ಅಲ್ ಹಫೀಜ್ ಸಂಸ್ಥೆಯ ಮಾಲೀಕ ಕಲೀಮುಲ್ ಹಫೀಜ್ ಹೇಳಿದರು.

ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಅಬ್ದುಲ್ ಖದೀರ್ ಅವರು ಸಂತಾಪ ಸೂಚಿಸಿ, ಅವರು ನನ್ನ ಗುರುವಾಗಿದ್ದರು.ಅಲ್ಲಾಹನು ಅವರ ಕೊಡುಗೆಯನ್ನು ಸ್ವೀಕರಿಸಲಿ ಮತ್ತು ಅವರ ತಪ್ಪುಗಳನ್ನು ಮನ್ನಿಸಿ, ಅವರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ನೀಡುವಂತೆ ಪ್ರಾರ್ಥಿಸುತ್ತೇನೆ ಎಂದು ಡಾ ಅಬ್ದುಲ್ ಖದೀರ್ ತಿಳಿಸಿದ್ದಾರೆ.

Latest Indian news

Popular Stories