
ಅವೈಜ್ಞಾನಿಕ ರೀತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ – ಕೃಪಾಂಕ ನೀಡಲು ಒತ್ತಾಯಿಸಿದ ದ.ಸಂ.ಸ ಉಡುಪಿ
ಉಡುಪಿ:ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಗ್ರಾಮೀಣ ಮಕ್ಕಳಿಗೆ ಕೋವಿಡ್ ಸಂಕ್ರಾಮಿಕ ರೋಗಾವಧಿಯಲ್ಲಿ ಕೃಪಾಂಕ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ರೈತ ಸಂಘಗಳು ಉಡುಪಿಯ ತಾಲೂಕು ಕಚೇರಿಯ ಮುಂದೆ ಪ್ರತಿಭಟನಾ ಸಭೆ ಆಯೋಜಿಸಿದ್ದರು.


ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಯಾವ ರಾಜ್ಯವೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿಲ್ಲ. ಆದರೆ ಕರ್ನಾಟಕ ರಾಜ್ಯಶಿಕ್ಷಣ ಸಚಿವರು ಜಿದ್ದಿಗೆ ಬಿದ್ದಂತೆ ವರ್ತಿಸಿ ಎಸ್.ಎಲ್.ಎಲ್.ಸಿ ಪರೀಕ್ಷೆ ನಡೆಸಿದ್ದಾರೆ.

ಆನ್ಲೈನ್ ತರಗತಿಗೆ ಯಾವ ಸೌಲಭ್ಯ ಕೊಟ್ಟಿದ್ದಾರೆ ಎಂಬ ವೈಜ್ಞಾನಿಕ ಚಿಂತನೆ ಮಾಡದೆ ಪರೀಕ್ಷೆ ನಡೆಸಿ ಬೇಧ ಬಾವ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದ ಮಕ್ಕಳಲ್ಲಿ ಯಾವ ಸೌಲಭ್ಯವಿಲ್ಲ. ಅಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ್ದು ಸರಿಯಲ್ಲ. ಸರಕಾರ ಫಲಿತಾಂಶ ಪ್ರಕಟಿಸುವಾಗ ಶೇ 20 ಕ್ರಮಾಂಕ ನೀಡಬೇಕೆಂದು ಆಗ್ರಹಿಸಿದರು. ಯಾಕೆಂದರೆ ಅಂಕಗಳ ಆಧಾರದಲ್ಲಿ ಸೀಟು, ಹಾಸ್ಟೆಲ್ ಸೌಕರ್ಯ ದೊರೆಯುತ್ತದೆ ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಅನ್ಯಾಯವಾಗದಂತೆ ವರ್ತಿಸಬೇಕು ಎಂದರು.ಪಿಯುಸಿ ಮಕ್ಕಳಿಗೆ ನೀಡಿದಂತೆ ಅಂಕಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರೊ.ಫಣಿರಾಜ್, ಹುಸೇನ್ ಕೋಡಿಬೆಂಗ್ರೆ ಸೇರಿದಂತೆ ಹಲವಾರು ಮಂದಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ಯಾಮರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಭಾಸ್ಕರ್ ಮಾಸ್ತರ್, ಅಣ್ಣಪ್ಪ ನಕ್ರೆ, ಕಾರ್ಕಳ, ಶ್ರೀಧರ ಕುಂಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.




