ಹುಸಿ ಬಾಂಬ್ ಕರೆ: ಶಾಲಾ ಆವರಣವನ್ನು ಅನ್ಯ ಚಟುವಟಿಕೆಗಳಿಗೆ ನೀಡದಂತೆ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಕಳೆದ ಡಿಸೆಂಬರ್ 1 ರಂದು ಬೆಂಗಳೂರಿನ 68 ಶಾಲೆಗಳಿಗೆ ನಕಲಿ ಬಾಂಬ್ ಇಮೇಲ್ ಬಂದ ನಂತರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ಪಠ್ಯೇತರ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಅನ್ಯ ಉದ್ದೇಶಗಳಿಗೆ ತಮ್ಮ ಕ್ಯಾಂಪಸ್ ಗಳಲ್ಲಿ ಅವಕಾಶ ನೀಡದಂತೆ ಆದೇಶ ಹೊರಡಿಸಿದೆ.

ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳು ಸರ್ಕಾರದಿಂದ ಅನುಮತಿ ಪಡೆಯಬೇಕು. ಪ್ರಾಂಶುಪಾಲರು ತಮ್ಮ ಶಾಲೆಗಳ ಆವರಣದಲ್ಲಿ ಯಾರಾದರೂ ಅಡ್ಡಾಡುವುದು ಕಂಡುಬಂದರೆ ಅಥವಾ ಅವರಿಗೆ ಬೆದರಿಕೆ ಇಮೇಲ್‌ಗಳು ಬಂದರೆ ಪೊಲೀಸ್ ಮತ್ತು ಡಿಎಸ್‌ಇಎಲ್ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಕ್ಕಳ ರಕ್ಷಣೆಗೆ ಶಾಲೆಗಳಲ್ಲಿ ಸುರಕ್ಷತಾ ನೀತಿ ಜಾರಿಗೆ ತರುವ ಅವಶ್ಯಕತೆಯನ್ನು ಒತ್ತಿಹೇಳಿರುವ ಶಿಕ್ಷಣತಜ್ಞರು ತಡಮಾಡದೆ ಅದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಆಯುಕ್ತರಾದ ಬಿ.ಬಿ.ಕಾವೇರಿ, ಹುಸಿ ಬಾಂಬ್ ಇಮೇಲ್ ಬೆದರಿಕೆಯ ನಂತರ ನಾವು ಆದೇಶವನ್ನು ಹೊರಡಿಸಿದ್ದೇವೆ, ಮಕ್ಕಳನ್ನು ಬೇರೆ ಯಾವುದೇ ಚಟುವಟಿಕೆಗೆ ಬಳಸಬಾರದು ಎಂದು ಶಾಲೆಗಳಿಗೆ ನಿರ್ದೇಶನ ನೀಡಿದ್ದೇವೆ. ಖಾಸಗಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಸುಲಭ, ಆದರೆ ಅವರ ಸುರಕ್ಷತೆಗೆ ಅಪಾಯವಿದೆ. ಅದೃಷ್ಟವಶಾತ್, ಮೊನ್ನೆ ಬಂದಿದ್ದು ಹುಸಿ ಕರೆಯಾಗಿತ್ತು. ಆದರೆ ನಾವು ಮುನ್ನಚ್ಚರಿಕೆ ಖಂಡಿತಾ ವಹಿಸಬೇಕು. ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎನ್ನುತ್ತಾರೆ.

ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಪರಿಗಣಿಸುತ್ತದೆ ಮತ್ತು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ನಮಗೆ ಶಾಲಾ ಮಕ್ಕಳಿಗೆ ಉತ್ತಮ ರಕ್ಷಣೆ ಬೇಕು ಎಂದು ಅವರು ಹೇಳಿದರು. ಆದರೆ, ಸರಕಾರ ಕೇವಲ ಸಲಹೆ ಸೂಚನೆ ನೀಡಿ ಅದನ್ನು ಬಿಟ್ಟಿರುವುದು ತಜ್ಞರಿಗೆ ಸಂತಸ ತಂದಿಲ್ಲ. ಸಮಸ್ಯೆಗಳನ್ನು ನಿರ್ವಹಿಸಲು ಸಲಹೆಗಾರರ ಅಗತ್ಯವಿದೆ ಎನ್ನುತ್ತಾರೆ.

ಮಕ್ಕಳನ್ನು ರಕ್ಷಿಸುವ ಕ್ರಮ ಮತ್ತು ಕಾನೂನುಗಳನ್ನು ಬಯಸುತ್ತಾರೆ. ನೀತಿಗೆ ಸಂಬಂಧಿಸಿದಂತೆ 2016 ರಲ್ಲಿ ಆದೇಶವನ್ನು ಜಾರಿಗೊಳಿಸಲಾಗಿದೆ. ಆದರೆ, ಶಾಲೆಗಳು ಅಥವಾ ಸರ್ಕಾರವು ಯಾವುದೇ ಪ್ರಗತಿಯನ್ನು ಮಾಡಿಲ್ಲ ಎನ್ನುತ್ತಾರೆ.
ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹರಾವ್, ಕೆಲವು ಶಾಲೆಗಳು ಸುತ್ತೋಲೆಗಳನ್ನು ಅನುಸರಿಸಿದರೆ, ಅನೇಕವು ಅನುಸರಿಸುವುದಿಲ್ಲ. ಶಿಕ್ಷಕರು ಮತ್ತು ಪೋಷಕರಿಗೆ ಸಮಸ್ಯೆ ನಿರ್ವಹಣೆಯಲ್ಲಿ ತರಬೇತಿ ನೀಡಬೇಕು ಮತ್ತು ವಿಪತ್ತು ನಿರ್ವಹಣೆಗೆ ಮಾರ್ಗಸೂಚಿಗಳನ್ನು ನೀಡಬೇಕು. ಡಿಸೆಂಬರ್ 1 ರ ಘಟನೆಯು ಕಣ್ಣು ತೆರೆಸುವಂತಿದೆ. ಸರ್ಕಾರವು ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯವನ್ನು ಕಂಡುಕೊಳ್ಳಬೇಕು, ಸೈಬರ್ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುತ್ತಾರೆ.

ಶಾಲೆಗಳಲ್ಲಿ ಶಿಕ್ಷಣ ತಜ್ಞರಿಗೆ ಮಾತ್ರವಲ್ಲದೆ ಬಿಕ್ಕಟ್ಟುಗಳನ್ನು ನಿರ್ವಹಿಸಲು ಸಲಹೆಗಾರರ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಶೇಷ ಜುವೆನೈಲ್ ಪೊಲೀಸ್ (SJP) ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು (CWO) ಶಾಲೆಗಳಿಗೆ ಭೇಟಿ ನೀಡಬೇಕು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ (KAMS) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ, ಯಾರಾದರೂ ಶಾಲೆಯ ಆಸ್ತಿಯನ್ನು ಅತಿಕ್ರಿಮಿಸಿ ದುರುಪಯೋಗಪಡಿಸುವ ಸಾಧ್ಯತೆಯಿದೆ. ಸಾರ್ವಜನಿಕ ಶಾಲೆಗಳು ದುರ್ಬಲವಾಗಿವೆ. ಖಾಸಗಿ ಶಾಲೆಗಳಂತೆ ಯಾವುದೇ ಭದ್ರತೆ ಮತ್ತು ಹೆಚ್ಚುವರಿ ಸಿಬ್ಬಂದಿ ಇಲ್ಲದ ಕಾರಣ ಅಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ನಾವು ಅನೇಕ ನಿದರ್ಶನಗಳನ್ನು ಕೇಳುತ್ತೇವೆ ಎನ್ನುತ್ತಾರೆ.

Latest Indian news

Popular Stories