ಲೋಕಸಭೆ ಭದ್ರತಾ ಲೋಪ ಕೇಸ್ : ಕೂಡಲೇ ಪ್ರತಾಪ್ ಸಿಂಹ ಅಮಾನತು ಮಾಡಬೇಕು : ಯತಿಂದ್ರ ಸಿದ್ದರಾಮಯ್ಯ ಆಗ್ರಹ

ಮೈಸೂರು : ಲೋಕಸಭೆ ಕಲಾಪದ ವೇಳೆ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾರಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು ಕೂಡಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಕಾರಣವಾಗಿದ್ದು ಕೂಡಲೇ ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಅಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾಜಿ ಶಾಸಕ ಯತಿಂದ್ರ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಯುವಕರಿಂದ ಸಂಸತ್ತಿನಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದು ವೇಳೆ ನಾವು ಪಾಸ್ ನೀಡಿದ್ದರೆ ಭಯೋತ್ಪಾದಕರ ಪಟ್ಟ ಕಟ್ಟುತ್ತಿದ್ದರು. ಬಿಜೆಪಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಪರ ಆ ಯುವಕರು ಕೆಲಸ ಮಾಡಿದ್ದಾರೆ. ಇದರ ಹಿಂದೆ ಬೇರೆ ಹುನ್ನಾರ ಇದೆ ಈ ವೇಳೆ ಕಲಾಪಕ್ಕೆ ಭದ್ರತೆಗೆ ಲೋಪ ಬಂದಿದೆ.ಲೋಕಸಭಾ ಕಲಾಪ ಅಂದರೆ ಬಿಗಿ ಭದ್ರತೆ ಇರುತ್ತದೆ ಆದರೆ ಈ ಯುವಕರು ಯಾವ ರೀತಿ ಒಳಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಗಲಾಟೆ ಸೃಷ್ಟಿ ಮಾಡಿದರೋ ಗೊತ್ತಿಲ್ಲ ಆದರೆ ಇದರ ಹಿಂದೆ ಯಾವ ಹುಣ್ಣಾರ ಇದೆ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ ಆದ್ದರಿಂದ ಪ್ರತಾಪ್ ಸಿಂಹ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Latest Indian news

Popular Stories