ಕರ್ನಾಟಕ ದ್ವಿತೀಯ ಪಿ ಯು ಸಿ ಪರೀಕ್ಷೆ ಆನ್ಲೈನ್ ನಡೆಯುವ ಸಾಧ್ಯತೆ

ಕರ್ನಾಟಕ ಪಿಯು ಬೋರ್ಡ್ ದ್ವಿತೀಯ ಪಿ ಯು ಪರೀಕ್ಷೆಯನ್ನು ಆನ್ಲೈನ್ ನಡೆಸುವ ಚಿಂತನೆಯಲ್ಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನಮಗೆ 90 ನಿಮಿಷಗಳ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆ ಪತ್ರಿಕೆಯನ್ನು ನೀಡಿ ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಿದರೆ ಸಾಕು ಎಂಬ ಸಲಹೆಗಳು ಬಂದಿದೆ ಎಂದು ಬೋರ್ಡ್ ಅಧಿಕಾರಿಯೊಬ್ಬರು ಹೇಳಿರುವ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಆನ್ಲೈನ್ ಪರೀಕ್ಷೆ ನಡೆಸುವುದು ಕಷ್ಟದ ಕೆಲಸವೇನಲ್ಲ, ಆದರೆ ಸೌಕರ್ಯಗಳಿಗೆ ಸ್ವಲ್ಪ ಕಷ್ಟವಾಗಲಿದೆ, ಅದಕ್ಕಾಗಿ ಸ್ಥಳೀಯ ಇಂಜಿನಿಯರಿಂಗ್ ಕಾಲೇಜು ಮತ್ತು ಇನ್ನಿತರ ದೊಡ್ಡ ಸಂಸ್ಥೆಗಳ ಸಹಾಯವನ್ನು ಪಡೆದು ನಡೆಸಬಹದೆಂದು ಅವರು ಹೇಳಿದ್ದಾರೆ.

ಮೇ 24 ರಂದು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಸಿಬಿಎಸ್ಇ ನಡೆಸುವ 12 ನೇ ತರಗತಿಯ ಪರೀಕ್ಷೆಯ ಬಗ್ಗೆ ಕೂಡ ಸರ್ಕಾರ ನಿರ್ಧಾರವನ್ನು ಪಡೆದಿಲ್ಲ. ಮೊದಲು ಲಸಿಕೆ ಹಾಕಿಸಿ ನಂತರ ಪರೀಕ್ಷೆ ಬರೆಸಿ ಎಂದು ದೆಹಲಿ ಮತ್ತು ಪಂಜಾಬ್ ಸರ್ಕಾರದ ಸಚಿವರು ಈಗಾಗಲೇ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಆನ್ಲೈನ್ ತರಗತಿಗಳು ನಡೆಯುತ್ತಿರುವಾಗ ಆನ್ಲೈನ್ ಪರೀಕ್ಷೆ ನಡೆಸುವುದು ಕಷ್ಟದ ಕೆಲಸವೇನಲ್ಲ.

Latest Indian news

Popular Stories