
“ಇಸ್ರೇಲ್-ಪ್ಯಾಲೆಸ್ತೀನ್ ವಿಚಾರವಾಗಿ ನಮ್ಮ ದೀರ್ಘಕಾಲದ ನಿಲುವು ಮುಂದುವರೆಯುತ್ತೆ” | ಮಾನವೀಯ ನೆರವು ಕಳಿಸುವ ಭರವಸೆ – ಪ್ಯಾಲೆಸ್ತೈನ್ ಪ್ರಧಾನಿಗೆ ಮೋದಿ ಬೆಂಬಲ
ಟೆಲ್ ಅವಿವ್: ಇಸ್ರೇಲ್ ಪ್ಯಾಲೆಸ್ತೀನ್ (Israel Palestinian) ನಡುವಿನ ಸಂಘರ್ಷ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡು ಬರ್ತಿಲ್ಲ. 13ನೇ ದಿನವೂ ದಾಳಿ ಮುಂದುವರಿದಿದೆ. ಗಾಜಾದ ಹಲವು ನಾಗರಿಕ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಗಾಜಾ ನಗರದ ಅಲ್-ಕುಡ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ನಾಗರಿಕ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸೆಂಟ್ರಲ್ ಗಾಜಾದಲ್ಲಿನ ಅಲ್-ಜಹ್ರಾ ಟವರ್ಸ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಮಾಡಿದ್ದು, ಈ ದಾಳಿಯಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋದ ಮಹಿಳಾ ನಾಯಕಿ ಜಮೀಲಾ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮೇಲೆ ಹೆಜ್ಬುಲ್ಲಾ ದಾಳಿ ದಾಳಿ ಮುಂದುವರೆಸಿದೆ. ನಿನ್ನೆ ರಾತ್ರಿ ಇಸ್ರೇಲ್‌ನ 9 ಕಡೆ ಹೆಜ್ಬುಲ್ಲಾ ರಾಕೆಟ್ ಹಾರಿಸಿದೆ ಇಸ್ರೇಲ್ ಕೂಡ ದಾಳಿ ತೀವ್ರಗೊಳಿಸಿ ಹಲವರನ್ನು ಹತ್ಯೆ ಮಾಡಿರುವ ಕುರಿತು ವರದಿಯಾಗಿದೆ.
ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್‌ಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಮಾತುಕತೆ ನಡೆಸಿದ್ದಾರೆ. ಆಸ್ಪತ್ರೆ ಮೇಲಿನ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ತಿಳಿಸಿದ್ದಾರೆ. ಅಗತ್ಯ ಮಾನವೀಯ ನೆರವು ಕಳಿಸುವ ಭರವಸೆಯನ್ನೂ ನೀಡಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್ ವಿಚಾರವಾಗಿ ನಮ್ಮ ದೀರ್ಘಕಾಲದ ನಿಲುವು ಮುಂದುವರೆಯುತ್ತೆ ಎಂದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.




