ಉದ್ಯಾವರ : ಎಸ್.ಎಫ್.ಎಕ್ಸ್ ಆಂಗ್ಲ ಮಾಧ್ಯಮ ಶಾಲೆ 100 ಪ್ರತಿಶತ ಸಾಧನೆ | ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.100 ಫಲಿತಾಂಶ

ಉಡುಪಿ : ಉದ್ಯಾವರ ಗ್ರಾಮೀಣ ಭಾಗದಲ್ಲಿನ ಮೇಲ್ಪೇಟೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯು ಎಸ್ ಎಸ್ ಎಲ್ ಸಿ ಯಲ್ಲಿ 100 ಪ್ರತಿಶತದೊಂದಿಗೆ ವಿಶೇಷ ಸಾಧನೆ ಮಾಡಿದೆ.

58 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಎಸ್ ಎಸ್ ಎಲ್ ಸಿ ಯಲ್ಲಿ ಸತತ 100 ಪ್ರತಿಶತ ಸಾಧನೆ ಮಾಡಿರುವ ಈ ವಿದ್ಯಾಸಂಸ್ಥೆಯು, ಕಳೆದ 15 ವರ್ಷಗಳಲ್ಲಿ 13 ಬಾರಿ ಈ ಸಾಧನೆ ಮಾಡಿದೆ. ಈ ವಿದ್ಯಾ ಸಂಸ್ಥೆಯು ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಆಡಳಿತಕ್ಕೆ ಒಳಪಟ್ಟಿದೆ.

ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.100 ಫಲಿತಾಂಶ

ಉಡುಪಿ, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಡಿಕೆಎಸ್ಸಿ ಅಧೀನ ಸಂಸ್ಥೆ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಶಾಲೆಯ 60 ಬಾಲಕರು ಹಾಗೂ 57 ಬಾಲಕಿಯರು ಸೇರಿದಂತೆ ಒಟ್ಟು 117 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 15 ಮಂದಿ ಉನ್ನತ ದರ್ಜೆ, 84 ಮಂದಿ ಪ್ರಥಮ ದರ್ಜೆ ಹಾಗೂ 18 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಪೈಕಿ ಅಫ್ಶೀನ್ ಆಯಿಷಾ 625ರಲ್ಲಿ 606 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೂಡೆ ಸಾಲಿಹಾತ್ ಶಾಲೆಯ ಉತ್ತಮ ಫಲಿತಾಂಶ

ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಒಟ್ಟು 78 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇಕಡಾ 98.7% ರಷ್ತು ಫಲಿತಾಂಶ ದಾಖಲಿಸಿದೆ. ಒಟ್ಟು ವಿಶಿಷ್ಟ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ 18, ದ್ವೀತಿಯ ಶ್ರೇಣಿ, 35, ತೃತೀಯ ಶ್ರೇಣಿ 11 ವಿದ್ಯಾರ್ಥಿಗಳು ಫಲಿತಾಂಶ ದಾಖಲಿಸಿದ್ದಾರೆ. ಫಾಜಿಲಾ ರಹಮತ್ತುಲ್ಲ ನಾಕ್ವಾ 625ರಲ್ಲಿ 575 ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

Latest Indian news

Popular Stories