ಫಝಲ್ ನೂರಾನಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 507 ನೇ ರ್ಯಾಂಕ್

ಕೋಝಿಕ್ಕೋಡ್: ಕೋಝಿಕ್ಕೋಡ್‌ನ ಮರ್ಕಝ್ ಸೆಂಟರ್ ಆಫ್ ಎಕ್ಸಲೆನ್ಸ್, ಜಾಮಿಯಾ ಮದೀನಾತುನ್ನೂರಿನ ವಿದ್ಯಾರ್ಥಿ ಅಬ್ದುಲ್ ಫಝಲ್ ನೂರಾನಿ ಅವರು ಯುಪಿಎಸ್‌ಸಿ ನಡೆಸುವ ಪ್ರತಿಷ್ಠಿತ ಸಿವಿಲ್ ಸರ್ವೀಸಸ್-2024 ಪರೀಕ್ಷೆಯಲ್ಲಿ 507 ನೇ ರ್ಯಾಂಕ್ ಗಳಿಸಿದ್ದಾರೆ.

ಮರ್ಕಝ್ ಗಾರ್ಡನ್ ಸಿವಿಲ್ ಸರ್ವಿಸ್ ಕೋಚಿಂಗ್ ಸೆಂಟರ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ಫಜಲ್ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು ಪ್ರಸ್ತುತ ತಿರುವನಂತಪುರಂ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿಯ ಬಾವಾ-ಅಸ್ರಬೀ ದಂಪತಿಯ ಪುತ್ರ ಫಝಲ್ ನೂರಾನಿ.

ಈ ಅಪೂರ್ವ ಸಾಧನೆಗಾಗಿ ಜಾಮಿಯಾ ಅಧ್ಯಕ್ಷ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹಾಗೂ ರೆಕ್ಟರ್ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿಯವರು ಫಝಲ್ ನೂರಾನಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Latest Indian news

Popular Stories