ಬೆಂಗಳೂರಿನಲ್ಲಿ ಎಪ್ರಿಲ್ ನಲ್ಲಿ ಇಲ್ಲ ಮಳೆ; ಮೇ ಯಲ್ಲಿ ಮಳೆ ಎಂದ ಹವಾಮಾನ ಇಲಾಖೆ

ಬೆಂಗಳೂರು: ಯುಗಾದಿ ಹಬ್ಬದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂಬ ಊಹೆ ಕೊನೆಗೂ ಸುಳ್ಳಾಗಿದ್ದು, ಮೇ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹೌದು.. ಕಳೆದೆರಡು ತಿಂಗಳುಗಳಿಂದ ಮಳೆಗಾಗಿ ಹಾತೊರೆಯುತ್ತಿದ್ದ ರಾಜ್ಯದ ಜನತೆ ಪ್ರಮುಖವಾಗಿ ಬೆಂಗಳೂರಿಗರು ಮಳೆಗಾಗಿ ಮತ್ತೊಂದಷ್ಟು ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಹವಾಮಾನ ಇಲಾಖೆಯ ನೂತನ ವರದಿಯನ್ವಯ ಮುಂದಿನ 10 ದಿನಗಳ ಕಾಲ ರಾಜ್ಯದ ಘಟ್ಟ ಪ್ರದೇಶಗಳನ್ನು ಹೊರತು ಪಡಿಸಿ ಬೆಂಗಳೂರು ಮತ್ತು ಕರ್ನಾಟಕದ ಇತರೆ ಭಾಗಗಳಲ್ಲಿ ಮಳೆ ಸಾಧ್ಯತೆ ಕಡಿಮೆ ಎಂದು ಹೇಳಿದೆ.

ಪ್ರಮುಖ ಜಾಗತಿಕ ಸಂಖ್ಯಾತ್ಮಕ ಹವಾಮಾನ ಮುನ್ಸೂಚನಾ ಸಂಸ್ಥೆಗಳಾದ ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರ (ECMWF) ಮತ್ತು ಜಾಗತಿಕ ಮುನ್ಸೂಚನೆ ವ್ಯವಸ್ಥೆ (GFS) ಈ ವರದಿ ನೀಡಿದ್ದು, ‘ಸಂಚಿತ ಮಳೆಯು ಮುಂದಿನ 10 ದಿನಗಳಲ್ಲಿ ಘಟ್ಟಗಳನ್ನು ಹೊರತುಪಡಿಸಿ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಯಾವುದೇ ರೀತಿಯ ಮಳೆ ಸಾಧ್ಯತೆ ಕಡಿಮೆ ಎಂದು ಹೇಳಿದೆ.

ಬೆಂಗಳೂರು 150+ ನಾಟೌಟ್ ಮುಂದುವರಿಕೆ

ಇನ್ನು ಹಾಲಿ ಹವಾಮಾನ ಇಲಾಖೆಯ ವರದಿಯನ್ವಯ ಬೆಂಗಳೂರಿನ ‘150+ ನಾಟೌಟ್’ ಮಳೆ ಇಲ್ಲದ ದಿನಗಳು ಮುಂದುವರೆದಿದ್ದು, ಬೆಂಗಳೂರಿಗರು ಮಳೆಗಾಗಿ ಮತ್ತೊಂದು ತಿಂಗಳು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಏಪ್ರಿಲ್‌ನಲ್ಲಿ ಸುರಿಯಬೇಕಿದ್ದ ಮಾವಿನ ಮಳೆ ಕೂಡ ಮಿಸ್ ಆಗಿದ್ದು, ಮೇ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

Latest Indian news

Popular Stories