ಮೇಲ್ಮನೆಯಲ್ಲಿ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಸಿದ್ಧತೆ

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಇನ್ನೂ ಐದು ತಿಂಗಳ ಸಮಯಾವಕಾಶವಿದೆ. ಒಂದು ವೇಳೆ ಬಿಜೆಪಿ ತನ್ನ ಗೆಲುವಿನ ಹಾದಿಯನ್ನು ಮುಂದುವರಿಸಿದರೇ ಮೇಲ್ಮನೆ ಬಣ್ಣ ಬದಲಾಯಿಸಬಹುದು. ಮೇಲ್ಮನೆಯಲ್ಲಿ ಒಟ್ಟು 75 ಸದಸ್ಯರಿದ್ದು, ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್ ನ 12 ಸದಸ್ಯರನ್ನು ಹೊಂದಿವೆ. ಒಬ್ಬರು ಸ್ವತಂತ್ರ ಸದಸ್ಯರಿದ್ದಾರೆ.
ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ, ಸಹಜವಾಗಿಯೇ ಆಡಳಿತಾರೂಡ ಪಕ್ಷದ ಪರವಾಗಿಯೇ ಚುನಾವಣಾ ಫಲಿತಾಂಶವಿರುತ್ತದೆ.
ನಾವು ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ. ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರಾಗಿರುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಇತ್ತೀಚೆಗೆ ನಡೆದ 10 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಏಳರಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಕೌನ್ಸಿಲ್ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ’ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಈಗಿನ 32 ಸ್ಥಾನಗಳಿಂದ ತನ್ನ ಪ್ರಮಾಣವನ್ನು ಹೆಚ್ಚಿಸುವ ಆಶಯವನ್ನು ಹೊಂದಿದೆ. ಮತ್ತು ಸದನದಲ್ಲಿ ಸರಳ ಬಹುಮತಕ್ಕಾಗಿ 38 ಸ್ಥಾನಗಳ ನಿರ್ಣಾಯಕ ಅರ್ಧದಾರಿಯ ದಾಟಿದೆ. ಪಕ್ಷವು ಇದನ್ನು ನಿರ್ವಹಿಸಿದರೆ, ಮೇಲ್ಮನೆಯಲ್ಲಿ ಇದೇ ಮೊದಲು ಬಹುಮತ ಪಡೆಯಲಿದೆ.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿಯ ಆರು ಸದಸ್ಯರು ನಿವೃತ್ತರಾಗಲಿದ್ದಾರೆ.
ಸದನದ ಬಲಾಲದ ಅರ್ಧದಷ್ಟು ಸಂಖ್ಯೆ ತಲುಪಿದರೆ ಬಿಜೆಪಿಗೆ ತನ್ನ ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ಜೆಡಿಎಸ್ ನ ಬೆಂಬಲದ ಅಗತ್ಯವಿರುವುದಿಲ್ಲ. ಜೆಡಿಎಸ್ ನ 12 ಸದಸ್ಯರಿದ್ದು, ಮೇಲ್ಮನೆಯಲ್ಲಿ ಮಸೂದೆ ಪಾಸು ಮಾಡುವ ಉದ್ದೇಶದಿಂದ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ ನ ಸಭಾಪತಿಯನ್ನಾಗಿ ಮಾಡುವ ಮೂಲಕ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ.

Latest Indian news

Popular Stories