ಗೋವಾ: ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ

ಪಣಜಿ: ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಮತ ನೀಡಿ ಅಧಿಕಾರಕ್ಕೆ ತಂದರೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪಣಜಿಯಲ್ಲಿ ಮಾತನಾಡಿದ ಕೇಜ್ರಿವಾಲ್, 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು ನಮಗೆ ಅಧಿಕಾರ ನೀಡಿದರೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ದೆಹಲಿಯ ಜನರು ಉಚಿತ ವಿದ್ಯುತ್ ಪಡೆಯಲು ಸಾಧ್ಯವಾದರೆ, ಗೋವಾದ ಜನರಿಗೆ ಏಕೆ ಉಚಿತ ವಿದ್ಯುತ್ ನೀಡಬಾರದು ಎಂದು ಅವರು ಪ್ರಶ್ನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಕೆಲ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದ್ದರ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಸಂಖ್ಯೆಗಳ ಪ್ರಕಾರ, ಪ್ರತಿಪಕ್ಷದಲ್ಲಿ ಇರಬೇಕಾದವರು ಈಗ ರಾಜ್ಯವನ್ನು ಆಳುತ್ತಿದ್ದಾರೆ ಮತ್ತು ಅಧಿಕಾರದಲ್ಲಿರಬೇಕಾದವರು ಈಗ ಪ್ರತಿಪಕ್ಷದಲ್ಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು. ಪಕ್ಷ ಬದಲಿಸಿದ ಈ ಶಾಸಕರು ಜನರ ಕೆಲಸವನ್ನು ಪೂರ್ಣಗೊಳಿಸಲು ತಾವು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ಹೇಳಿಕೊಂಡರು.
ಆದರೆ, ಅವರು ಹೇಳಿಕೊಂಡAತೆ ಜನರ ಕೆಲಸವನ್ನು ಮಾಡಿದ್ದಾರೆಯೇ? ಹಣದ ಆಮಿಷದಿಂದ ಪಕ್ಷ ಬದಲಾಯಿಸಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ನಮ್ಮ ನಾಯಕರು ನಮಗೆ ದ್ರೋಹ ಮಾಡಿದ್ದಾರೆಂದು ಜನರು ಭಾವಿಸಿದ್ದಾರೆ. ‘ ಎಂದು ಅವರು ಹೇಳಿದರು.
`ಗೋವಾ ಬದಲಾವಣೆ ಬಯಸಿದೆ. ಜನರು ಶುದ್ಧ ರಾಜಕೀಯವನ್ನು ಬಯಸುತ್ತಾರೆ ‘ಎಂದು ಅವರು ಹೇಳಿದರು.

Latest Indian news

Popular Stories

error: Content is protected !!