ಶಾಸಕ ಯತ್ನಾಳ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡ ಮುಶ್ರೀಫ್

HM photo 1 Election, Featured Story, Politics, State News, Vijayapura
ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬ್ಯಾನರ್ ಹರಿದ ವಿಷಯ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಭೋಗಸ್ ಮತದಾನ ಮಾಡಿರುವುದನ್ನು ಸಿಬಿಐ ತನಿಖೆ ಮಾಡಿಸಬೇಕೆಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಗರ ಶಾಸಕರು ಅನಾವಶ್ಯಕವಾಗಿ ಪಾಕಿಸ್ತಾನ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಗರದಲ್ಲಿ ಚಿಂಚೋಳಿ, ಬೀದರ್, ನಾಗಠಾಣ, ಸೇಡಂ ಸೇರಿದಂತೆ ರಾಜ್ಯದ ಹಲವಾರು ಕಡೆಯಿಂದ ಜನರನ್ನು ಕರೆಯಿಸಿ ಖೊಟ್ಟಿ ಮತದಾನ ಮಾಡಿಸಿ ಗೆದ್ದಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ಎಲ್ಲ ಸಾಕ್ಷಿ ಸಮೇತ ಪ್ರಕರಣ ದಾಖಲಿಸಿದ್ದೇನೆ. ದಿನ ಬೆಳಗಾದರೆ ಸಾಕು ಶಾಸಕರ ಬಾಯಿಂದ ಬರೀ ಪಾಕಿಸ್ತಾನದ ಮಾತುಗಳೇ ಕೇಳಿ ಬರುತ್ತಿದ್ದು, ಅಭಿವೃದ್ಧಿ ಕಡೆ ಮೊದಲು ಗಮನ ಕೊಡಬೇಕು. ನಗರದ ಟಿಪ್ಪು ಸುಲ್ತಾನ ವೃತ್ತ, ಮನಗೂಳಿ ಅಗಸಿ ಮೇಲೆ ಪಾಕಿಸ್ತಾನ ದ್ವಜ ಹಾರಿಸಲು ಹಚ್ಚಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಧೈರ್ಯವಿದ್ದರೆ ಸಿಬಿಐಗೆ ವಹಿಸಿ ನೋಡೋಣ ಎಂದು ಸವಾಲೆಸೆದರು. ಇದೇ ವಿಷಯವಿಟ್ಟುಕೊಂಡು ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಅದೆ ಪ್ಯಾಟರ್ನ್ ನೀನ ಪಾಕಿಸ್ತಾನ ದ್ವಜ ತಂದು ಸುಟ್ಟಿದವರು ಯಾರು ಎಂಬದು ಗೊತ್ತಾಗಬೇಕು. ನಗರ ಶಾಸಕರು ಹಣ ಹಂಚಿಲ್ಲ, ಭೋಗಸ್ ಮತದಾನ ಮಾಡಿಸಿಲ್ಲ ಎಂದು ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಸಹಿಸದೇ ಅನಾವಶ್ಯಕವಾಗಿ ಟೀಕೆ ಮಾಡುತ್ತ ಇನ್ನೊಬ್ಬರ ಮೇಲೆ ಗೂಬೆ ಕೂಡಿಸುವುದನ್ನು ಬಿಡಬೇಕು. ತಾತ್ವಿಕ ಸಿದ್ದಾಂತದ ಮೇಲೆ ನಿಮ್ಮ ಮಾತುಗಳಿರಲಿ, ಯಾವ ಕಾರ್ಯಕ್ರಮಕ್ಕೆ ಹೋಗಿರುತ್ತಿರೋ ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇವಲ ಶತ್ರು ರಾಷ್ಟ್ರ ಪಾಕಿಸ್ತಾನ ಬಗ್ಗೆ ಮಾತನಾಡುವುದು ಮತ್ತು ಹಿಂದು-ಮುಸ್ಲಿಂರ ನಡುವೆ ದ್ವೇಷ ಹರಡುವುದು ಈ ಎರಡು ವಿಷಯ ಬಿಟ್ಟು ಬೇರೆ ಏನು ಇಲ್ಲ ಎನ್ನುವಂತಾಗಿದೆ. ಧೈರ್ಯವಿದ್ದರೆ ನಿಮ್ಮದೆ ಕೇಂದ್ರದಲ್ಲಿ ಸರಕಾರವಿದೆ, ನಿಮ್ಮ ಪಕ್ಷದ ಪ್ರಧಾನಿಯವರಿಗೆ ಹೇಳಿಸಿ ನಮ್ಮ ಸರಕಾರದ ಹಾಗೆ ಗ್ಯಾರಂಟಿ ಕೊಡಿಸಿ, ಜನರಿಗೆ ಉಚಿತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಬೆಲೆಗಳೆಲ್ಲ ಗಗನಕ್ಕೇರಿದ್ದು ಅವುಗಳನ್ನು ಮೊದಲು ಕಡಿಮೆ ಮಾಡಿಸಿ, ಅದನ್ನು ಬಿಟ್ಟು ಬಾಯಿ ಚಪಲಕ್ಕೆ ಮಾತಾಡಬಾರದು. ಕೇವಲ ಹಿಂದೂ ಮುಸ್ಲಿಂ ಎಂಬ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುವುದು ನಿಮ್ಮ ಕೆಲಸವಾಗಿದೆ. ಬ್ಯಾನರ್ ಹರಿಸುವಷ್ಟು ಚಿಲ್ಲರೆ ಕೆಲಸ ನಾನು ಮಾಡುವುದಿಲ್ಲ ಅಂತಹ ಬುದ್ದಿಯೂ ಇಲ್ಲ. ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೇನೆ ಎಂದರು.
ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು 40% ಕಮೀಷನ್ ತಿಂದಿಲ್ಲ, ಸಿದ್ಧಸಿರಿ ಮೂಲಕ ಹಣ ಹಂಚಿ ಖೊಟ್ಟಿ ಮತದಾನದಿಂದ ಆರಿಸಿ ಬಂದು ಇಷ್ಟು ಮಾತನಾಡುತ್ತಿದ್ದಾರೆ. ನೆನಪಿರಲಿ 2014ರಲ್ಲಿ ಯಾರು ಗಲಭೆ ಮಾಡಿಸಿ ಓಡಿ ಹೋಗಿದ್ದರು?. ಎಂಬುದು ಇತಿಹಾಸವಿದೆ. ಅದಕ್ಕಾಗಿ ನಗರ ಶಾಸಕರು ನಮ್ಮ ಬಗ್ಗೆ ಹಾಗೂ ಮುಸ್ಲಿಂರ ಬಗ್ಗೆ ಮಾತನಾಡಿದರೆ ಇನ್ನೂ ಮೇಲೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Latest Indian news

Popular Stories