7 ಸಚಿವ ಸ್ಥಾನ ನೀಡಿದ್ದಾರೆ ಇನ್ನೆಷ್ಟು ಬೇಕಿತ್ತು?: ಶಾಮನೂರು ಶಿವಶಂಕರಪ್ಪಗೆ ಎಚ್.ವಿಶ್ವನಾಥ್ ತಿರುಗೇಟು

h vishwanath shamnur1 Belagavi, Featured Story, Politics, State News
ಬೆಳಗಾವಿ: ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಇನ್ನೆಷ್ಟು ಸ್ಥಾನ ಬೇಕಿತ್ತು, ರಾಜ್ಯ ಸರ್ಕಾರದಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಖಾರವಾಗಿ ಪ್ರತಿಕ್ರಿಯಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್ನಲ್ಲಿ ಅವಕಾಶ ಸಿಕ್ಕಿವೆ ಎಂದರು.
ನಿಮಗೆ ಸಚಿವ ಸ್ಥಾನ ಬೇಕಿದ್ದರೆ ನಾಯಕತ್ವ ವಹಿಸಿಕೊಂಡು ನಿಮ್ಮ ಸಮುದಾಯದ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಿ ಅದರಿಂದ ಗೆದ್ದು ಬಂದು ಸಿಎಂ ಆಗಿ ಈ ವಿಚಾರದಲ್ಲಿ ಆಸಕ್ತಿ ತೋರಿಸಿ ಎಂದರು. ಇನ್ನು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದ ೆಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸಿದ್ದೀರಿ? ಎಂದು ತಿರುಗೇಟು ನೀಡಿದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರು ಆಶೀರ್ವದಿಸಿದ್ದಾರೆ. ಈ ರೀತಿಯಾಗಿ ಜಾತಿಯ ವಿಷಯ ಮಾತನಾಡಿದರೆ ಆಡಳಿತ ಕುಸಿಯುತ್ತದೆ. ನಿಮಗೆ ಜವಾಬ್ದಾರಿ ಇಲ್ಲವೇ? ಜವಾಬ್ದಾರಿಯಿಂದ ಮಾತನಾಡಿ. ನೀವೇ ಹೀಗೆ ಮಾತನಾಡಿದರೆ, ಸಣ್ಣ–ಪುಟ್ಟ ಜಾತಿಗಳ ಭವಿಷ್ಯವೇನು? ಅದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ ಎಂದು ಸಲಹೆ ನೀಡಿದರು.

Latest Indian news

Popular Stories